ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
೨೦೨೩-೨೪ ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಜಿಲ್ಲಾ ಜಿಲ್ಲಾಸ್ಪತ್ರೆಗೆ ಅಂಬ್ಯುಲೆನ್ಸ್ ವಾಹನವನ್ನು ನೀಡಿದರು.
ಮೂವತ್ತು ಲಕ್ಷ ರೂ.ವೆಚ್ಚದಲ್ಲಿ ಖರೀಧಿಸಲಾಗಿರುವ ಅಂಬ್ಯುಲೆನ್ಸ್ ವಾಹನವನ್ನು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ರವೀಂದ್ರರವರಿಗೆ ಹಸ್ತಾಂತರಿಸಿದ ಶಾಸಕ ಡಾ.ಎಂ.ಚಂದ್ರಪ್ಪ ಜಿಲ್ಲಾಸ್ಪತ್ರೆಗೆ
ಬರುವ ರೋಗಿಗಳಿಗೆ ತತಕ್ಷಣ ಆರೋಗ್ಯ ಸೇವೆ ಲಭಿಸಲಿ ಎನ್ನುವ ಉದ್ದೇಶವಿಟ್ಟುಕೊಂಡು ಅಂಬ್ಯುಲೆನ್ಸ್ ವಾಹನ ನೀಡಿದ್ದೇನೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.