ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಮಾಮ್ ಗ್ರಾಮದಲ್ಲಿ ದೊಡ್ಡಬಳ್ಳಾಪುರ ಶಾಸಕರ ಅನುದಾನದಲ್ಲಿ ಸಿಸಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಶಾಸಕ ಧೀರಜ್ ಮುನಿರಾಜು ಗುದ್ದಲಿ ಪೂಜೆ ನೇರವೇರಿಸಿದರು.
ಅವರು ಮಾತನಾಡಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿ ಉತ್ತಮ ಅರೋಗ್ಯ ಕಲ್ಪಿಸುವ ಸಲುವಾಗಿ ಗ್ರಾಮದ ನೈರ್ಮಲ್ಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಗ್ರಾಮಗಳಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ಅದ ಗಟ್ಟು ಚರಂಡಿ ನೀರು ಹರಿಯದೇ ಒಂದೆಡೆ ನಿಂತು ರೋಗ ರುಜಿನಗಳು ಶುರುವಾಗುತ್ತಿವೆ. ಮನುಷ್ಯ ಆರೋಗ್ಯದಿಂದ ಇರಬೇಕಾದರೆ ಶುಚಿತ್ವವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿಯ ತಾಲ್ಲೂಕು ಅಧ್ಯಕ್ಷ ನಾಗೇಶ್ ಸೇರಿದಂತೆ ಕೊನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಸುಮಂಗಲ, ಸದಸ್ಯರಾದ ಬಾಲರಾಜು, ಆರಾಧ್ಯ ಆರ್ ಎಲ್, ಮಂಜುನಾಥ್, ಅಶ್ವತ್ತಪ್ಪ ಪ್ರಭಾಕರ್, ಬಸವರಾಜು, ಪ್ರಕಾಶ್, ನಾಗೇಶ್, ಟಿಎಪಿಎಂಸಿ,
ಎಂಪಿಸಿಎಸ್ ಸದಸ್ಯರ ರಾಮಾಂಜಿನಪ್ಪ ಕೆ ಎಮ್ ಹಾಗೂ ಗ್ರಾಮದ ಮುಖಂಡರಾದ ಮಂಜುನಾಥ ಸ್ವಾಮಿ, ಪೆದ್ದಣ್ಣ, ಗೋವಿಂದಸ್ವಾಮಿ, ತಿಮ್ಮರಾಜಪ್ಪ, ಸಂಜೀವಪ್ಪ, ಶ್ರೀನಿವಾಸ್ ವಿ, ಎಸ್ಎಸ್ಎನ್ ನಂಜಪ್ಪ ಹಾಗೂ ಕೊನಘಟ್ಟ ಗ್ರಾಮ ಪಂಚಾಯಿತಿ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.