ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ: ಶಾಸಕ ಡಾ. ಶ್ರೀನಿವಾಸ್

News Desk

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ  ಡಾ. ಶ್ರೀನಿವಾಸ್ ಎನ್ ಟಿ ರವರು ಕೂಡ್ಲಿಗಿ ತಾಲೂಕು  ಸಾರ್ವಜನಿಕ ಆಸ್ಪತ್ರೆಯಲ್ಲಿ ಸಭಾಂಗಣ ನಿರ್ಮಾಣ (
191. 91 ಲಕ್ಷಗಳು) ವೆಚ್ಚದಲ್ಲಿ  ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಆರೋಗ್ಯ ಸೇವೆ  ಮತ್ತು ಅದರ ಗುಣಮಟ್ಟ ಅಗತ್ಯ ಬಡವ ಬಲಿದರೆನ್ನದೆ ಎಲ್ಲರಿಗೂ ಒಳ್ಳೆಯ ವೈದ್ಯಕೀಯ ಪಡೆಯುವ ಹಕ್ಕಿದೆ ಅದಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.

ಸಾರ್ವಜನಿಕರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಆರೋಗ್ಯ ಸಿಬ್ಬಂದಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು ಮತ್ತು ರೋಗಿಗಳನ್ನು ವಿನಾ ಕಾರಣ ಅಲೆದಾಡಿಸದೆ ಚಿಕಿತ್ಸೆ ನೀಡಬೇಕು ಅದು ನಿಮ್ಮಗಳ ಕರ್ತವ್ಯ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಪಟ್ಟಣ ಅಧ್ಯಕ್ಷರು ಪಂಚಾಯತಿ ಸದಸ್ಯರುಗಳು ಮುಖಂಡರು ಯುವಕರು ಉಪಸ್ಥಿತರಿದ್ದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

 

 

Share This Article
error: Content is protected !!
";