ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಪುತ್ರಿ ಸರಸ್ವತಿ ಕೆ.ಸಿ.ವಿ. ಹದಿನೆಂಟು ವರ್ಷದೊಳಗಿನ ಬಾಲಕಿಯರ ವಿಭಾಗದ ವಾಲ್‌ಸೆಟ್ ಸ್ಪರ್ಧೆಯಲ್ಲಿ ಭಾಗವಹಿಸಿ ನಿರಂತರ ೨ ಗಂಟೆ ೩೬ ಸೆಕೆಂಡುಗಳ ಕಾಲ ನಿಂತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಗೆ ಸೇರಿದ್ದಾರೆ.
ಡಾನ್‌ಬೋಸ್ಕೋ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಹದಿನಾಲ್ಕು ವರ್ಷದ ಸರಸ್ವತಿ ಕೆ.ಸಿ.ವಿ. ಇವರ ಸಾಧನೆಗೆ ಡಾನ್‌ಬೋಸ್ಕೋ ಶಾಲೆಯ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.