ಸರ್ಕಾರಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ ನೀಡಿದ ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಾನು ಓದಿನ ಕಡಬನಟ್ಟೆಯ ಪ್ರಾಥಮಿಕ ಶಾಲೆಗೆ ನೂರು ವರ್ಷಗಳ ಸಂಭ್ರಮ
, ಜೊತೆಗೆ ನೂತನ ಕಟ್ಟದೊಂದಿಗೆ ಆಂಗ್ಲ ಮಾಧ್ಯಮ ಪ್ರಾರಂಭದಿಂದ ನನ್ನ ಕನಸು ನನಸಾಗಿದೆ ಎಂದು ಚಳ್ಳಕೆರೆ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು. 

ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದಲ್ಲಿ ಶನಿವಾರದಂದು ಸರ್ಕಾರದಿಂದ ಆಯ್ಕೆಯಾಗಿರುವ ಸರ್ಕಾರಿ ಕನ್ನಡ ಮತ್ತು ಆಂಗ್ಲ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ ನೀಡಿ ಮಾತನಾಡಿದರು.

- Advertisement - 

ನನ್ನ ಹುಟ್ಟೂರು ಮತ್ತು ನಾನು ಓದಿದ ಕಡಬನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷದಿಂದ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಭೋದನೆಗೆ ಇಂದು ಚಾಲನೆ ನೀಡಿದ್ದು ಸಂತೋಷ ತಂದಿದೆ.

ಚಿತ್ರದುರ್ಗ ತಾಲೂಕಿನಲ್ಲಿ ೧೫ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಆಯ್ಕೆ ಆಗಿದ್ದು ಅದರಲ್ಲಿ ನಮ್ಮ ಊರ ಶಾಲೆ ಒಂದಾಗಿದ್ದು ನನಗೆ ಖುಷಿ ತಂದಿದೆ. ದಾಖಲಾತಿ ಅನುಗುಣವಾಗಿ ಆಂಗ್ಲ ಮಾಧ್ಯಮಕ್ಕೆ ಶಾಲೆಗಳನ್ನು ಆಯ್ಕೆ ಮಾಡಿದ್ದು ನಮ್ಮ ಶಾಲೆ ಹೆಚ್ಚಿನ ದಾಖಲಾತಿ ಹೊಂದಿದ್ದರಿಂದ ಆಯ್ಕೆ ಆಗಲು ಅನುಕೂಲವಾಯಿತು ಎಂದರು.

- Advertisement - 

ಮಕ್ಕಳಿಗೆ ಇಂಗ್ಲಿಷ್ ಅಧ್ಯಯನದ ಅಗತ್ಯವಿದೆ. ಖಾಸಗಿ ಶಾಲೆಗಳಿಗೆ ಹೆಚ್ಚು ಆಕರ್ಷಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುತ್ತಿರುವುದು ಸಂತೋಷ ತಂದಿದೆ.

ಕನ್ನಡ ನಮ್ಮ ಮಾತೃಭಾಷೆಯಾಗಿದ್ದು ಕನ್ನಡ ಜೊತೆ ಇಂಗ್ಲಿಷ್ ಮಾಧ್ಯಮ ಆರಂಭಿಸುವುದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ. ಸರ್ಕಾರ ಹಂತ ಹಂತವಾಗಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಆಂಗ್ಲ ಮಾಧ್ಯಮ ಆರಂಭ ಮಾಡುತ್ತಿರುವುದರಿಂದ ಸರ್ಕಾರಿ ಶಾಲೆಗಳ ದಾಖಲಾತಿಗೆ ಸಹಾಯಕವಾಗಲಿದೆ.

ಪೋಷಕರು ನಮ್ಮಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ದಾಖಲಿಸಲು ಬಡವರು, ಮಧ್ಯಮ ವರ್ಗದವರು ಸಾಕಷ್ಟು ಕಷ್ಟಪಡುತ್ತಿದ್ದರು ವಿಶೇಷವಾಗಿ ಅಂತಹ ಕುಟುಂಬಗಳಿಗೆ ಆಂಗ್ಲ ಮಾಧ್ಯಮ ಆರಂಭದಿಂದ ಒಂದು ರೀತಿಯಲ್ಲಿ ಪೋಷಕರ ಆಂಗ್ಲ ಮಾಧ್ಯಮದ ಅಭ್ಯಾಸ ಮಾಡಿಸುವ ಕನಸು ನನಸಾಗುತ್ತಿವೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂರು ವರ್ಷಗಳ ಪೂರೈಸಿದೆ. ಈ ಶಾಲೆಯಲ್ಲಿ ನಾನು ಒಂದನೇ ತರಗತಿಯಿಂದ ಏಳನೇ ಅಭ್ಯಾಸ ಮಾಡಿದ ನಮ್ಮೂರ ಶಾಲೆಗೆ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂದು ನಾನು ಶಾಸಕನಾದ ಸಂದರ್ಭದಲ್ಲಿ ಅಂದುಕೊಂಡಿದ್ದೆ ಆ ಕನಸಿನಂತೆ ೨ ಕೋಟೆ ವೆಚ್ಚದಲ್ಲಿ ಎಂಟು ಕೊಠಡಿಗಳು ಭವ್ಯವಾದ ಕಟ್ಟಡ ನಿರ್ಮಾಣ ಮಾಡಿಲಾಗಿದೆ. 

ಸರ್ಕಾರಿ ಹಿರಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ ೧೩೭ ಮಕ್ಕಳು ಅಭ್ಯಾಸ ಮಾಡುತ್ತಿದ್ದು ಒಂದನೇ ತರಗತಿ ಆಂಗ್ಲ ಮಾಧ್ಯಮಕ್ಕೆ ೧೧ ಮಕ್ಕಳು ದಾಖಲಾಗಿರುವುದು ಉತ್ತಮ ಬೆಳವಣಿಗೆ ಆಗಿದ್ದು ಆಂಗ್ಲ ಮಾಧ್ಯಮ ಯಶಸ್ಸು ಪಡೆಯುವ ಮೂಲಕ ಮಕ್ಕಳಿಗೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಬಿಆರ್ಸಿ ಸಂಪತ್ ಕುಮಾರ್, ಮಾಜಿ ಜಿ.ಪಂ ಸದಸ್ಯ ಬಾಬುರೆಡ್ಡಿ, ಬಿಐಆರ್ಟಿ ತಿಮ್ಮಾರೆಡ್ಡಿ, ತುರುವನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗರತ್ಮಮ್ಮ, ಮುಖ್ಯೋಪಾಧ್ಯಾಯ ಜಿ.ಟಿ.ಉಮಾ, ಶಿಕ್ಷಕರಾದ ಎಂ.ವಿಶ್ವನಾಥ್, ಎಸ್.ಗಿರೀಶ್, ಜಿ.ಟಿ.ಸುಮಾ, ಎನ್.ಎಂ.ನೇತ್ರಾವತಿ ಮತ್ತು ಗ್ರಾಮ ಪಂಚಾಯತಿ ಸದಸ್ಯರು, ಎಸ್ಡಿಎಂಸಿ ಸದಸ್ಯರು ಹಾಜರಿದ್ದರು.

 

Share This Article
error: Content is protected !!
";