ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರಗಳಿಂದ ಆಚರಿಸಿದರಲ್ಲದೆ, ಲೋಕಕಲ್ಯಾಣಕ್ಕಾಗಿ ಸಾಮೂಹಿಕವಾಗಿ ಅಲ್ಲಾನನ್ನು ಪ್ರಾರ್ಥಿಸಿದರು.
ನಗರದ ಬಳ್ಳಾರಿ ರಸ್ತೆಯ ಜಾಮೀಯ ಮಸೀದಿಬಳಿ ನಗರದ ಸುಮಾರು ಹತ್ತಕ್ಕೂ ಹೆಚ್ಚು ಮಸೀದಿಯ ಜನರು ಬಂದು ಸೇರಿ ನೆಹರು, ಬಸವೇಶ್ವರ ವೃತ್ತದ ಮೂಲಕ ಈದ್ಗಾ ಮೈದಾನ ಸೇರಿಸಿದರು. ಬೆಳಗ್ಗೆ ಸುಮಾರು ೯.೪೫ಕ್ಕೆ ಹೊರಟ ಬೃಹತ್ ಮೆರವಣಿಗೆ ಈದ್ಗಾ ಮೈದಾನ ತಲುಪಿತು. ಎಲ್ಲರೂ ಪರಸ್ವರ ಹಬ್ಬದ ಶುಭಾಶಯಗಳನ್ನು ವಿನಿಮಯಮಾಡಿಕೊಂಡರು.
ಪ್ರಾರ್ಥನೆಗೂ ಮುನ್ನ ಕ್ಷೇತ್ರಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ, ಭೇಟಿ ನೀಡಿ ಮುಸ್ಲಿಂ ಸಮಾಜಬಂಧುಗಳೊಂದಿಗೆ ಸೌಹಾರ್ಧಿತ ಮಾತುಕಥೆನಡೆಸಿ ಹಬ್ಬದ ಶುಭಾಶಯಗಳನ್ನು ಕೋರಿದರು. ಶಾಸಕರಿಗೆ ಶುಭಕೋರಿದರು. ರಂಜಾನ್ಹಬ್ಬದ ಸಂದರ್ಭದಲ್ಲಿ ತಾವೆಲ್ಲರೂ ಭಕ್ತಿ, ಶ್ರದ್ದೆಯಿಂದ ಉಪವಾಸ ವ್ರತಮುಗಿಸಿ ಹಬ್ಬದ ಆಚರಣೆಯಲ್ಲಿದ್ದೀರಿ, ಕಳೆದ ಹಲವಾರು ದಶಕಗಳಿಂದ ಚಳ್ಳಕೆರೆ ನಗರದಲ್ಲಿ ಶಾಂತಿ, ಸೌಹಾರ್ಧತೆ ಕಾಪಾಡುವ ದೃಷ್ಠಿಯಿಂದ ಎಲ್ಲರೊಂದಿಗೆ ಸಂಘಟಿತರಾಗಿ ಪ್ರೀತಿ,ವಿಶ್ವಾಸವನ್ನು ಹಂಚಿಕೊಂಡಿದ್ದೀರಿ, ನಿಮ್ಮಲ್ಲಿರುವ ನಂಬಿಕೆ, ವಿಶ್ವಾಸದ ಫಲವಾಗಿ ಎಲ್ಲರು ಉತ್ತಮ ಬದುಕುಯ ಕಟ್ಟಿಕೊಂಡಿದ್ದೀರಿ, ಸಮಾಜದ ಎಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ. ಇದೇ ಪ್ರೀತಿ, ವಿಶ್ವಾಸ ಸದಾಕಾಲ ಇರಲಿ ಎಂದು ತಿಳಿಸಿದರು.
ಅತಿಕೂರ್ರೆಹಮಾನ್ ರಮೇಶ್ಗೌಡ, ಎಚ್.ಆಂಜನೇಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಪರಶುರಾಮಪುರ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಮುಸ್ಲಿಂ ಮುಖಂಡರಾದ ಅಧ್ಯಕ್ಷ ಯಾಕುಬ್ಆಲಿ, ಎಸ್.ಮುಜೀಬುಲ್ಲಾ, ಅನ್ವರ್ಮಾಸ್ಟರ್, ಎಚ್.ಎಸ್.ಸೈಯದ್, ಬಿ.ಫರೀದ್ಖಾನ್, ಸಲೀಂ, ಖಲೀಂ, ಅಯೂಬ್, ಬಷೀರ್ಆಹಮ್ಮದ್, ನಭಿ, ಜುಬೇರ್, ಕೆ.ದಾದಾಪೀರ್ ಮುಂತಾದವರು ಉಪಸ್ಥಿತರಿದ್ದರು.

