ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರವೂ ಶೋಷಿತ ಸಮುದಾಯದ ಮೇಲೆ ಆಗುತ್ತಿದ್ದ ದೌರ್ಜನ್ಯಗಳು ನಿಯಂತ್ರಣವಾಗಲಿಲ್ಲ. ಈ ಸಮುದಾಯವನ್ನು ಜನಸಮುದಾಯದಿಂದ ದೂರವಿಡುವ ಪ್ರಯತ್ನಗಳು ನಿರಂತರವಾಗಿ ನಡೆದವು. ಇಂತಹ ಸಂದರ್ಭದಲ್ಲಿ ಶೋಷಿಯ ಸಮುದಾಯವನ್ನು ಜಾಗೃತಿಗೊಳಿಸಿ, ಬದುಕುಕಂಡುಕೊಳ್ಳುವಂತೆ ಮಾಡಲು ಶ್ರಮಿಸಿದ ಹಸಿರುಕ್ರಾಂತಿಹರಿಕಾರ ಡಾ.ಬಾಬು ಜಗಜೀವನರಾಮ್‌ರವರ ಕಾರ್ಯ ಎಂದಿಗೂ ಮರೆಯಲಾಗದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮುಂಭಾಗದಲ್ಲಿರುವ ಡಾ.ಬಾಬು ಜಗಜೀವನರಾಮ್‌ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ೧೧೯ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಡಿನೆಲ್ಲೆಡೆ ರಾಷ್ಟ್ರದ ಮಾಜಿಉಪಪ್ರಧಾನಮಂತ್ರಿ,. ಶೋಷಿತ ಸಮುದಾಯದ ಅಗ್ರಗಣ್ಯನಾಯಕ ಡಾ.ಬಾಬುಜಗಜೀವನರಾಮ್‌ರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ತಮ್ಮ ಇಡೀ ಬದುಕಿನಲ್ಲಿ ಅನೇಖ ಅವಮಾನಗಳನ್ನು ಎದುರಿಸಿ ದೈರ್ಯವಾಗಿ ಎಲ್ಲವನ್ನೂ ಮೆಟ್ಟಿನಿಂತ ಕೀರ್ತಿ ಅವರದ್ದು ಎಂದರು.
ತಹಶೀಲ್ದಾರ್ ರೇಹಾನ್‌ಪಾಷ, ಸಮಾಜಕಲ್ಯಾಣಾಧಿಕಾರಿ ದೇವ್ಲಾನಾಯ್ಕ, ಪೌರಾಯುಕ್ತೆ ಡಾ.ನಾಗವೇಣಿ, ಇಒ ಶಶಿಧರ, ಬಿಇಒ ಕೆ.ಎಸ್.ಸುರೇಶ್, ಎಸ್ಟಿ ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜ್, ಬಿಸಿಎಂ ಅಧಿಕಾರಿ ರಮೇಶ್, ಸರ್ಕಾರಿನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಜಿಲ್ಲಾಕೆಡಿಪಿ ಸದಸ್ಯ ಓ.ರಂಗಸ್ವಾಮಿ,
ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಶಶಿಧರ, ಜಯಕುಮಾರ್, ಟಿ.ವಿಜಯಕುಮಾರ್, ಮಾರಣ್ಣ, ಗಿರಿಯಪ್ಪ, ಟಿ.ವೀರಭದ್ರಿ, ಎಂ.ಶಿವಮೂರ್ತಿ, ಕೃಷ್ಣಮೂರ್ತಿ, ಬೋರಣ್ಣ, ಎಸ್.ಮುಜೀಬ್, ಬಿ.ಟಿ.ರಮೇಶ್‌ಗೌಡ, ಶಿವಲಿಂಗಪ್ಪ, ಎಸ್.ಬಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

