ಕನ್ನಡ ಉಳಿಸಿ ಬೆಳೆಸುವ ಸಂಕಲ್ಪ ನಮ್ಮದಾಗಬೇಕು: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಸಾವಿರಾರು ವರ್ಷಗಳಿಂದ ಕನ್ನಡ ನಾಡಿನ ಜನರಿಗೆ ಬದುಕನ್ನು ಕೊಟ್ಟಜೀವ ಭಾಷೆ ನಾವೆಲ್ಲರೂ ಕಂಕಣಬದ್ದರಾಗಿ ಕನ್ನಡವನ್ನು ಬೆಳೆಸುವ ಸಂಕಲ್ಪವನ್ನು ಮಾಡೋಣವೆಂದು ಕ್ಷೇತ್ರದ ಶಾಸಕ
, ಸಣ್ಣಕೈಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಶನಿವಾರ ಹಳೇಟೌನ್‌ನ ಶ್ರೀವೀರಭದ್ರಸ್ವಾಮಿ ಯುವಕರ ಸ್ನೇಹಬಳಗ ಹಮ್ಮಿಕೊಂಡಿದ್ದ ೧೦ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವೀರಭದ್ರಸ್ವಾಮಿಯುವ ಬಳಗ ೧೦ವರ್ಷಗಳಿಂದ ನಿರಂತರವಾಗಿ ಕನ್ನಡ ಭಾಷೆಯನ್ನು ಮಾಡುತ್ತಾ ಬಂದಿದೆ. ಯುವಕರಲ್ಲಿ ಕನ್ನಡದ ಬಗ್ಗೆ ಸ್ಪೂರ್ತಿ ಸದಾ ಇರಬೇಕು ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನೇಹ ಬಳಗದ ಅಧ್ಯಕ್ಷ ಪಿ.ಎಂ.ಪ್ರದೀಪ್‌ಕುಮಾರ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮೂಲಕ ನಮ್ಮ ಸಂಘಟನೆ ಇನ್ನೂ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದರು.

 ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ಹೊಯ್ಸಳಗೋವಿಂದ, ಎಂ.ಜೆ.ರಾಘವೇಂದ್ರ, ಶಿಲ್ಪಮುರುಳೀಧರ, ಶಶಿಧರ, ಎಚ್.ವಿ.ಪ್ರಸನ್ನಕುಮಾರ್, ನಾಗರಾಜು, ಸಿ.ಗುರುಸಿದ್ದಮೂರ್ತಿ, ಕೆ.ಶಿವಕುಮಾರ್, ಶಿವು ಮುಂತಾದವರು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";