ಸಂವಿಧಾನ ರಕ್ಷಿಸುವ ಕಾರ್ಯ ನಿರಂತರ ನಡೆಯಬೇಕು : ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಷ್ಟ್ರದೆಲ್ಲೆಡೆ ನಾವೆಲ್ಲರೂ ಸಂತೋಷ
, ಸಂಭ್ರಮದಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನಮ್ಮ ಆಡಳಿತಕ್ಕೆ ಸಮರ್ಪಿಸಿಕೊಂಡು ಸಂವಿಧಾನ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್‌ರವರ ಈ ಮಹಾನ್‌ಕೊಡುಗೆಯನ್ನು ದೇಶ ಎಂದೂಮರೆಯದು. ನಾವೆಲ್ಲರೂ ಸಂವಿಧಾನವನ್ನು ರಕ್ಷಿಸುವ ಸಂಕಲ್ಪವನ್ನು ಮಾಡಬೇಕೆಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಬುಧವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕುಪಂಚಾಯಿತಿ, ಸಮಾಜಕಲ್ಯಾಣ ಇಲಾಖೆ, ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.

- Advertisement - 

ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವೂ ಸಹ ಈ ಹೆಮ್ಮೆಯ ದಿನಾಚರಣೆಯನ್ನು ಗೌರವಿತವಾಗಿ ಆಚರಣೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಇಲಾಖೆಗಳು ಇದರಲ್ಲಿ ಪಾಲ್ಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಂವಿಧಾನ ಕಾಲ್ನಡಿಗೆ ಜಾಗೃತಿಜಾಥದ ಮೂಲಕ ಸಾರ್ವಜನಿಕರಲ್ಲೂ ಸಂವಿಧಾನ ಆಶಯ ಹಾಗೂ ಮಹತ್ವವನ್ನು ತಿಳಿಸಿದಂತಾಗಿದೆ. ಶಾಲಾ, ಕಾಲೇಜುಗಳಲ್ಲೂ ನಮ್ಮ ಸಂವಿಧಾನ ಆಶಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧಸ್ಪರ್ಧೆ ಏರ್ಪಡಿಸಿ ಅವರು ಸಂವಿಧಾನದ ರೂಪುರೇಷೆಗಳ ಬಗ್ಗೆ ತಿಳಿದುಕೊಳ್ಳವ ಅವಕಾಶ ಮಾಡಿಕೊಟ್ಟಿದೆ,

ರಾಜ್ಯದ ಪ್ರತಿಯೊಂದು ಆಡಳಿತವೂ ಸಂವಿಧಾನ ಬದ್ದವಾಗಿ ನಡೆಯುತ್ತಿದೆ. ಸಂವಿಧಾನವನ್ನು ಹೊರತುಪಡಿಸಿ ನಾವುಯಾವುದೇ ರೀತಿಯ ಆಡಳಿತ ಹಾಗೂ ಅಭಿವೃದ್ದಿಕೈಗೊಳ್ಳಲು ಸಾಧ್ಯವಿಲ್ಲ. ನಮ್ಮೆಲ್ಲರ ಭವಿಷ್ಯದ ಬದುಕು ಸಂವಿಧಾನಮೇಲೆ ಅವಲಂಬಿತವಾಗಿದೆ. ಸರ್ಕಾರದ ನಿಲುವನ್ನು ಸಾಮಾನ್ಯ ಪ್ರಜೆಯೂ ಪ್ರಶ್ನಿಸುವ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ. ನಮ್ಮ ಸಂವಿಧಾನಕ್ಕೆ ವಿಶ್ವಮನ್ನಣೆ ದೊರಕಿದೆ ಎಂದು ತಿಳಿಸಿದರು.

- Advertisement - 

ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ಧಾರ್ ರೇಹಾನ್‌ಪಾಷ, ನಮ್ಮ ಆಡಳಿತಕ್ಕೆ ನಮ್ಮ ಸಂವಿಧಾನವೇ ಮೂಲತಳಹದಿ. ಸರ್ಕಾರದ ಪ್ರತಿಯೊಂದು ಕಾರ್ಯವೂ ಸಂವಿಧಾನಾತ್ಮಕವಾಗಿ ನಡೆಸಬೇಕಿದೆ. ನಮ್ಮ ಸಂವಿಧಾನ ನಮಗೆ ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಹಾಗೂ ನಮ್ಮ ಜವಾಬ್ದಾರಿಯ ಬಗ್ಗೆ ಸಾಕಷ್ಟುಮಾಹಿತಿ ನೀಡಿದೆ. ಆಡಳಿತಕ್ಕೆ ಸಂವಿಧಾನದ ಕೊಡುಗೆ ಅಪಾರವೆಂದರು.

ಇದೇ ಸಂದರ್ಭದಲ್ಲಿ ಸಂವಿಧಾನದ ಕರಡುಪ್ರತಿಯ ಪ್ರತಿಜ್ಞಾನ ವಿಧಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ ಬೋಧಿಸಿದರು. ಪ್ರಬಂಧ ಮತ್ತು ಚಿತ್ರಕಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಬಹುಮಾನವಿತರಿಸಿದರು. ಕಾಲ್ನಡಿಗೆ ಜಾಥ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನೆಹರೂ ವೃತ್ತದಲ್ಲಿ ಮಾನವ ಸರಪಳಿನಿರ್ಮಿಸುವ ಮೂಲಕ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿದರು.

ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣ, ಇನ್ಸ್‌ಪೆಕ್ಟರ್ ಕೆ.ಕುಮಾರ್, ಸಮಾಜ ಕಲ್ಯಾಣಾಧಿಕಾರಿ ದೇವಲನಾಯ್ಕ, ಬಿಇಒ ಕೆ.ಎಸ್.ಸುರೇಶ್, ಬಿಸಿಎಂ ಅಧಿಕಾರಿ ರಮೇಶ್, ಸಿಡಿಪಿಒ ರಾಜಾನಾಯ್ಕ, ಪರಿಶಿಷ್ಟ ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜ್, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಮಾಜಿ ನಗರಸಭಾ ಸದಸ್ಯರಾದ ರಮೇಶ್‌ಗೌಡ, ರಾಘವೇಂದ್ರ, ಕವಿತಾ, ವೀರಭದ್ರಯ್ಯ, ಟಿ.ಮಲ್ಲಿಕಾರ್ಜುನ್, ಟಿ.ವಿಜಯಕುಮಾರ್, ವೀರಭದ್ರಿ, ಶಶಿಧರ, ತಾಪಂ ಮಾಜಿ ಸದಸ್ಯ ಸಮರ್ಥರಾಯ, ಮುಖಂಡರಾದ ತಿಪ್ಪೇಸ್ವಾಮಿ, ಎಚ್.ಎಸ್.ಸೈಯದ್, ನಾಗರಾಜು, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

 

Share This Article
error: Content is protected !!
";