ವರ್ಷದ ಅತ್ಯುತ್ತಮ ಕೈಗಾರಿಕಾ ನಾವೀನ್ಯತೆಯ ಶ್ರೇಷ್ಠ ವ್ಯಕ್ತಿ ಪ್ರಶಸ್ತಿ ಭಾಜನರಾದ ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಳ್ಳಕೆರೆ ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಅವರಿಗೆ “ವರ್ಷದ ಅತ್ಯುತ್ತಮ ಕೈಗಾರಿಕಾ ನಾವೀನ್ಯತೆಯ ಶ್ರೇಷ್ಠ ವ್ಯಕ್ತಿ ೨೦೨೫ ಪ್ರಶಸ್ತಿ” ದೊರೆತಿದೆ.

ಬೆಂಗಳೂರಿನ ರಾಜ್ ಭವನ ರಸ್ತೆಯಲ್ಲಿರುವ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಶನಿವಾರದಂದು ಬೆಂಗಳೂರು ಶಾಖೆ ಟೆರಿಯಲ್ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್‌ನ ಸ್ಕೇಲ್ ೨೦೨೫ ರ ಬೆಳ್ಳಿ ಮಹೋತ್ಸವದಲ್ಲಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

- Advertisement - 

ಈ ಪ್ರಶಸ್ತಿಯನ್ನು ಟೆರಿಯಲ್ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್‌ನ ಸ್ಕೇಲ್ ರಾಷ್ಟ್ರೀಯ ಅಧ್ಯಕ್ಷರು ನೀಡಿದ್ದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಅವರ ಪರವಾಗಿ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಕ್ಯಾಪ್ಟನ್ ರಾಜೇಂದ್ರ ಅವರು ಪ್ರಶಸ್ತಿ ಸ್ವೀಕರಿಸಿದರು.

ಈ ವರ್ಷದ ಅತ್ಯುತ್ತಮ ಕೈಗಾರಿಕಾ ನಾವೀನ್ಯತೆಯ ಶ್ರೇಷ್ಠ ವ್ಯಕ್ತಿ ೨೦೨೫ ಪ್ರಶಸ್ತಿ” ಯನ್ನು ಟೆರಿಯಲ್ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್‌ನ ಸ್ಕೇಲ್ ಕಂಪನಿ ನನಗೆ ನೀಡಿ ಗೌರವಿಸಿರುವುದು ನನಗೆ ಮತ್ತಷ್ಟು ಜವಬ್ದಾರಿ ಹೆಚ್ಚಾಗಿದೆ. ನನ್ನ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಕೆಲಸಗಳಿಗ ಹೆಚ್ಚಿನ ವೇಗವನ್ನು ನೀಡಿ ಕೆಲಸ ಮಾಡಿದ್ದೇನೆ.

- Advertisement - 

ನಮ್ಮ ಕೆಲಸವನ್ನು ಗುರುತಿಸಿದೆ. ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಯುವ ಉದ್ಯಮಿಗಳನ್ನು  ಹೆಚ್ಚು ಉದ್ಯಮ ಕ್ಷೇತ್ರಕ್ಕೆ ತರಲು ಪ್ರಯತ್ನ ನಡೆಸುತ್ತಿದ್ದೇನೆ ಎಂದು ಶಾಸಕರು ಹಾಗೂ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.

 

Share This Article
error: Content is protected !!
";