ಜೋಡಿ ಕೊಲೆ ಸಂತ್ರಸ್ತ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ ಟಿ.ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ಜೋಡಿ ಕೊಲೆಯಾದ ಕುಟುಂಬಸ್ಥರನ್ನು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಭೇಟಿ ಮಾಡಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ನನಗೆ ತುಂಬಾ ನೋವಿನ ಸಂಗತಿಯಾಗಿದೆ. ಇಂತಹ ಪ್ರಕರಣಗಳು ಯಾವ ಗ್ರಾಮದಲ್ಲಿ ನಡೆಯಬಾರದು ಎಂದರು.

ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೊಮ್ಮಕ್ಕನಹಳ್ಳಿಯ ಹನುಮಂತಪ್ಪ ಹಾಗೂ ಆತನ ಪತ್ನಿ ತಿಪ್ಪಮ್ಮ ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಅಂತಹ ಕಷ್ಟಪಟ್ಟು ಜೀವನ ಸಾಧಿಸುತ್ತಿದ್ದ ಕುಟುಂಬ ಗಂಡ ಹೆಂಡತಿಯನ್ನು ಯಾರೇ ಕೊಲೆ ಮಾಡಿದ್ದರು ಸಹ ಶಿಕ್ಷಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

 ಕೊಲೆಗೆ ಸಂಬಂಧಿಸಿದಂತೆ  ಇಬ್ಬರನ್ನು ವಶಕ್ಕೆ ಪಡೆದಿದ್ದು ಇನ್ನೂ ಹೆಚ್ಚಿನ ತನಿಖೆ ಮೂಲಕ ಈ ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲಾರನ್ನೂ ಬಂಧಿಸುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ಕಾನೂನು ಎಲ್ಲಾರಿಗೂ ಒಂದೇ ಆಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜೊತೆ ಸಹ ಮಾತನಾಡಿದ್ದು ಕಾನೂನು ರೀತಿಯ ಎಲ್ಲಾ ರೀತಿಯ ಸಿದ್ದತೆ ಪೋಲಿಸ್ ಇಲಾಖೆ ಮಾಡಿಕೊಂಡು ಹುಡುಕಾಟ ನಡೆಸುತ್ತಿದ್ದು ಕುಟುಂಬಕ್ಕೆ ನ್ಯಾಯ ಒದಗಿಸಲಾಗುತ್ತದೆ.

ಸರ್ಕಾರಿ ಸೌಲಭ್ಯದ ಭರವಸೆ:
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಪುತ್ರಿಗೆ ಮದುವೆ ಮಾಡಿ ಬೊಮ್ಮಕ್ಕನಹಳ್ಳಿಗೆ ನೀಡಿದ್ದರು. ಕುಟುಂಬ ಸಮಸ್ಯೆಯಿಂದ ಮದುವೆ ಮಾಡಿಕೊಟ್ಟಿದ್ದ ಅರ್ಷಿತಾ ಸಹ ಗಂಡನ ಕಿರುಕುಳದಿಂದ ತವರು ಮನೆಗೆ ಬಂದಿದ್ದಳು ಎಂದು ಹೇಳುತ್ತಿದ್ದು ಆ ಹೆಣ್ಣು ಮಗಳಿಗೆ ತಾತ್ಕಾಲಿಕ ಉದ್ಯೋಗ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ  ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುತ್ತದೆ. ಕಿರಿಯ ಪುತ್ರಿ ಸಹ ಎಸ್ಎಸ್ಎಲ್ ಸಿ ಅಧ್ಯಯನ ಮಾಡುತ್ತಿದ್ದು ಆ ಹುಡುಗಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.

 ಕಾನೂನು ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ: ಸಾರ್ವಜನಿಕರು ಯಾವುದೇ ಸಮಸ್ಯೆಗಳನ್ನು ಕಾನೂನು ಮೂಲಕ ಬಗೆಹರಿಸಿಕೊಳ್ಳಬೇಕು. ಗ್ರಾಮಗಳಲ್ಲಿ ಸೌಹಾರ್ದ ಬದುಕು ನಡೆಸಬೇಕು. ಕೊಲೆ ಮಾಡುವ ಹಂತಕ್ಕೆ ಯಾರು ಸಹ ತೆರಳಬಾರದು. ಸಮಸ್ಯೆಗಳಿಗಾಗಿ ದ್ವೇಷ  ಪರಿಹಾರವಲ್ಲ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಬಾಬುರೆಡ್ಡಿ, ಮುಖಂಡರುಗಳಾದ ಸುಭಾಸ್ ರೆಡ್ಡಿ, ಉಮೇಶ್, ಗೋಪಾಲರೆಡ್ಡಿ, ಜಯಣ್ಣ, ಮಲ್ಲಿಕಾರ್ಜುನ ಮತ್ತು ಗ್ರಾಮಸ್ಥರು ಇದ್ದರು.

- Advertisement -  - Advertisement -  - Advertisement - 
Share This Article
error: Content is protected !!
";