ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿವರ್ಷದಂತೆ ಈ ವರ್ಷವೂ ನಗರದ ಮುಸ್ಲಿಂ ಬಂಧುಗಳು ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಬಾಗಿಯಾದಲ್ಲದೆ, ಧರ್ಮಗುರು ಮೌಲ್ವಿಯವರು ನೀಡಿದ ಉಪದೇಶಗಳನ್ನು ಆಲಿಸಿದರು.
ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿ, ಚಳ್ಳಕೆರೆಯ ಮುಸ್ಲಿಂ ಬಂಧುಗಳು ಶಾಂತಿ ಪಾಲನೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಪ್ರತಿವರ್ಷವೂ ನಡೆಯುವ ಹಬ್ಬಗಳ ಎಲ್ಲರೊಂದಿಗೆ ಬೆರೆತು ಹಬ್ಬವನ್ನು ಆಚರಿಸುತ್ತಾರೆ. ಎಲ್ಲಾ ಧರ್ಮದಲ್ಲೂ ಸಮಾನತೆಯ ಪ್ರೀತಿ ಅಡಗಿದೆ. ನಾನು ಸಹ ಇಂದು ಎಲ್ಲರಿಗೂ ಉತ್ತಮ ಭವಿಷ್ಯವನ್ನು ನೀಡಲಿ ಎಂದು ಅಲ್ಲಾನನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅತಿಕೂರ್‌ರೆಹಮಾನ್, ಅನ್ವರ್‌ಮಾಸ್ಟರ್, ಎಸ್.ಎಚ್.ಸೈಯದ್, ಎಸ್.ಮುಜೀಬ್, ಬಿ.ಫರೀದ್‌ಖಾನ್, ಮಾರ್ಬಲ್‌ಸಲೀಂ, ಖಾದರ್, ಕೆ.ದಾದಾಪೀರ್, ಹಯಾತ್‌ಭಾಷ ಮುಂತಾದವರು ಉಪಸ್ಥಿತರಿದ್ದರು.