ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಜೀ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಠೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ ಓಲೈಸುವ ರಾಜಕಾರಣವೆಂದು ಹೀಗೆಳೆಯುವ ಭಾರತೀಯ ಜನತಾ ಪಾರ್ಟಿ ಅವರನ್ನು ಕೇಳುತ್ತಿದ್ದೇವೆ , ಇದು ಓಲೈಕೆ ಅಲ್ಲವೇ ?? ಇದಕ್ಕೆ ಬೇರೆ ಏನಾದರೂ ಹೆಸರಿದೆಯೇ?? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ದೇಶದ್ಯಾಂತ ಯುಗಾದಿ ಹಬ್ಬವನ್ನು ರಂಜಾನ್ ಗೆ ಒಂದು ದಿನಮೊದಲೇ ನವ ವರ್ಷ, ಬಿಹು, ವೈಶಾಖಿ, ಪಾನ ಸಂಕ್ರಾಂತಿ, ಗುಡಿ ಪಾಡ್ವಾ, ಬೈಶಾಖ ಎಂಬ ಹೆಸರುಗಳಿಂದ ಹಬ್ಬವನ್ನು ಆಚರಿಸುತ್ತಿರುವ ಹಿಂದೂಗಳ ಬಗ್ಗೆ ಮೋದಿ ಜೀ ಅವರಿಗೆ ಪ್ರೇಮ ಬರಲಿಲ್ವಾ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಭಾರತೀಯ ಕಾಂಗ್ರೆಸ್ ನವರು ಮಾಡಿದರೆ ಒಂದು ವ್ಯಾಖ್ಯಾನ , ಮೋದಿ ಜೀ ಅವರು ಮಾಡಿದರೆ ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ವ್ಯಾಖ್ಯಾನವೇ?
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ “ಸೌಗಾತ್-ಎ ಮೋದಿ” ಅಭಿಯಾನದ ಮೂಲಕ ಈದ್ ಗೆ ವಿತರಿಸುತ್ತಿರುವ ಕಿಟ್ ಗಳು, ಹಿಂದೂ ಹಬ್ಬಕ್ಕೆ ಹಿಂದೂಗಳಿಗೆ ವಿತರಿಸಲು ಸಾಧ್ಯವಾಗದಿರುವುದಕ್ಕೆ? ಬಿ.ಜೆ.ಪಿ ಅವರ ಬಳಿಉತ್ತರವಿದೆಯೇ?? ಎಂದು ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.