ರೈತರಿಗೆ ಬಂಪರ್ ಕೊಡುಗೆ ನೀಡಿದ ಮೋದಿ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“2025ರ ಆರಂಭದ ದಿನವೇ ಅನ್ನದಾತರಿಗೆ ಮೋದಿ ಸರ್ಕಾರದ ಬಂಪರ್ ಉಡುಗೊರೆ” ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ರೈತರಿಗೆ ಸುಲಭ ದರದಲ್ಲಿ ರಸಗೊಬ್ಬರ ಒದಗಿಸಲು ವಿಶೇಷ ಪ್ಯಾಕೇಜ್‌ಅನ್ನು ವಿಸ್ತರಿಸಲು ಕೇಂದ್ರದ ಸಚಿವ ಸಂಪುಟವು ಮಹತ್ವದ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ಫಸಲ್ ಬಿಮೆ ಯೋಜನೆ ಮತ್ತು ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮುಂದುವರಿಕೆ ರೈತರಿಗೆ ನೆರವಾಗಲಿದ್ದು, ಹೆಚ್ಚುವರಿ 1 ವರ್ಷ ನೈಸರ್ಗಿಕ ವಿಕೋಪಗಳಿಂದ ಆದ ಬೆಳೆ ನಷ್ಟಕ್ಕೆ ಪರಿಹಾರ ಸಿಗುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ಸಹಾಯ ದೊರೆಯಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

 

- Advertisement -  - Advertisement - 
Share This Article
error: Content is protected !!
";