ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಡೆದ ಭೀಕರ ಕಾಲ್ತುಳಿತ ದುರ್ಘಟನೆಯಲ್ಲಿ ಹಲವು ಪ್ರಾಯಾಣಿಕರು ಸಾವನ್ನಪ್ಪಿದ್ದರು.
ಈ ದುರ್ಘಟನೆಯ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು, ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಗೆ ಮುಜುಗರ ಉಂಟಾಗಿತ್ತು. ರೈಲ್ವೆ ಸಚಿವರ ರಾಜೀನಾಮೆಯ ಒತ್ತಡವೂ ಬಂದಿತ್ತು ಎಂದು ಕಾಂಗ್ರೆಸ್ ತಿಳಿಸಿದೆ.
ಈಗ ರೈಲ್ವೆ ಸಚಿವಾಲಯ ಈ ದುರ್ಘಟನೆಯ ವಿಡಿಯೋವನ್ನು ಡಿಲೀಟ್ ಮಾಡುವಂತೆ ಸಾಮಾಜಿಕ ಜಾಲತಾಣ ವೇದಿಕೆ ‘X’ ಗೆ ಆದೇಶಿಸಿದೆ. ತನ್ನ ವೈಫಲ್ಯ, ನಿರ್ಲಕ್ಷ್ಯವನ್ನು ಮರೆಮಾಚಲು ಕೇಂದ್ರದ ಮೋದಿ ಸರ್ಕಾರ ಸರ್ವಾಧಿಕಾರಿ ನಡೆಗಳನ್ನು ಅನುಸರಿಸುತ್ತಿದೆ. ತೆಗೆದು ಹಾಕಬೇಕಿರುವುದು ವಿಡಿಯೋಗಳನ್ನಲ್ಲ, ಅಸಮರ್ಥ ರೈಲು ಮಂತ್ರಿಯನ್ನ! ಎಂದು ಕಾಂಗ್ರೆಸ್ ಟೀಕಿಸಿದೆ.