ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಹಕ್ಕಿನ ಪಾಲನ್ನೂ ಕಸಿದುಕೊಂಡು ಕನ್ನಡಿಗರಿಗೆ ಅನ್ಯಾಯ ಎಸಗುತ್ತಿದೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಮರಳಿ ಸಿಗುತ್ತಿರುವುದು ಬಿಡುಗಾಸು ಮಾತ್ರ, ನಾವು ಕಟ್ಟುವ ರೂ. 1 ತೆರಿಗೆಯಲ್ಲಿ ನಮಗೆ ಸಿಗುತ್ತಿರುವುದು ಕೇವಲ 15 ಪೈಸೆ! ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ರಾಜ್ಯದಿಂದ ಒಟ್ಟು 4 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದರೂ, ತೆರಿಗೆ ಹಂಚಿಕೆಯ ಸಿಂಹಪಾಲನ್ನು ಉತ್ತರ ಪ್ರದೇಶಕ್ಕೆ ಕೊಟ್ಟು, ರಾಜ್ಯಕ್ಕೆ ಮಾತ್ರ ಕೇವಲ 45,000 ಕೋಟಿ ನೀಡುತ್ತಿದೆ. ಅಲ್ಲದೇ ಅನುದಾನದ ರೂಪದಲ್ಲಿ ಕೇವಲ 15,000 ಕೋಟಿ ನೀಡುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.