ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಟುಂಬದ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಯನ್ನು ಪರಿಗಣಿಸದೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಧುನಿಕ ಶಿಕ್ಷಣವನ್ನು ಖಚಿತಪಡಿಸುತ್ತಿದೆ ಮೋದಿ ಸರ್ಕಾರ ಎಂದು ಬಿಜೆಪಿ ತಿಳಿಸಿದೆ.
ನವೋದಯ ವ್ಯಾಪ್ತಿಗೆ ಒಳಪಡದ ಜಿಲ್ಲೆಗಳಲ್ಲಿ ಹೊಸ ನವೋದಯ ವಿದ್ಯಾಲಯಗಳ ಸ್ಥಾಪನೆ ಮೂಲಕ ಗ್ರಾಮೀಣ ಭಾರತದ ಬಲವರ್ಧನೆಗೆ ಮೋದಿ ಸರ್ಕಾರವು ಮಹತ್ತರ ಹೆಜ್ಜೆ ಇರಿಸಿದೆ ಎಂದು ತಿಳಿಸಿದೆ.
ಉನ್ನತ ಗುಣಮಟ್ಟದ ಬೋಧನೆ, ನವೀನ ಕಲಿಕಾ ವಿಧಾನ ಮತ್ತು ಆಧುನಿಕ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಮೋದಿ ಸರ್ಕಾರವು ದೇಶದಾದ್ಯಂತ ನಾಗರಿಕ/ರಕ್ಷಣಾ ವಲಯದಡಿಯಲ್ಲಿ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ ಎಂದು ಬಿಜೆಪಿ ತಿಳಿಸಿದೆ.