ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಪ್ರಧಾನಮಂತ್ರಿ ಮೋದಿ ಅವರಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ ! ಲಭ್ಯವಾಗಿದೆ.
ಕೋವಿಡ್ –19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ದೇಶಕ್ಕೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ಡೊಮಿನಿಕಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ʻಡೊಮಿನಿಕಾ ಅವಾರ್ಡ್‌ಆಫ್‌ಹಾನರ್ʼ ನೀಡಿ ಗೌರವಿಸಿದೆ.
ಗಯಾನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಯಾನಾ ಅಧ್ಯಕ್ಷರು ಮತ್ತು ಕುಟುಂಬಸ್ಥರೊಂದಿಗೆ ʼತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವʼ (ಏಕ್ ಪೇಡ್ ಮಾ ಕೆ ನಾಮ್) ಅಭಿಯಾನದಲ್ಲಿ ಪಾಲ್ಗೊಂಡರು.
ಪ್ರಧಾನಿ ಮೋದಿಗೆ ಗಯಾನಾದ ಅತ್ಯುನ್ನತ ಗೌರವ ಪ್ರದಾನ !
ಜಾಗತಿಕ ಸಮುದಾಯಕ್ಕೆ ಅನನ್ಯ ಸೇವೆ, ದಕ್ಷ ನಾಯಕತ್ವ ಮತ್ತು ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಕೊಡುಗೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ʻದಿ ಆರ್ಡರ್‌ಆಫ್‌ಎಕ್ಸ್‌ಲೆನ್ಸ್ʼ ನೀಡಿ ಗೌರವಿಸಲಾಗಿದೆ.
ಬಾರ್ಬಡೋಸ್‌ದೇಶವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾರ್ಬಡೋಸ್‌ನ ಪ್ರತಿಷ್ಠಿತ ಆರ್ಡರ್‌ಆಫ್‌ಫ್ರೀಡಮ್‌ಆಫ್‌ಬಾರ್ಬಡೋಸ್‌ಅವಾರ್ಡ್‌ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.