ಅತ್ಯಂತ ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಅರ್ಬನ್ ನಕ್ಸಲರು ಮುನ್ನಡೆಸುತ್ತಿದ್ದಾರೆ- ಮೋದಿ

News Desk

ಚಂದ್ರವಳ್ಳಿ ನ್ಯೂಸ್, ವಾರ್ಧಾ:
ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಅತ್ಯಂತ ಭ್ರಷ್ಟ
ಕಾಂಗ್ರೆಸ್ ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್ ಮತ್ತು ಅರ್ಬನ್ ನಕ್ಸಲರು ಮುನ್ನಡೆಸುತ್ತಿದ್ದಾರೆಂದು ಟೀಕಿಸಿದ್ದಾರೆ.

ಅವರು ಶುಕ್ರವಾರ ಮಹಾರಾಷ್ಟ್ರದ ವಾರ್ಧಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ, ಮಹಾತ್ಮಾ ಗಾಂಧಿಯವರಂತಹ ಮಹಾನ್ ವ್ಯಕ್ತಿಯೊಂದಿಗೆ ನಂಟು ಹೊಂದಿದ್ದ ಕಾಂಗ್ರೆಸ್ ಪಕ್ಷವಲ್ಲ. ಕಾಂಗ್ರೆಸ್‌ನಲ್ಲಿ ದ್ವೇಷದ ಭೂತ ಪ್ರವೇಶಿಸಿದೆ. ಇಂದಿನ ಕಾಂಗ್ರೆಸ್‌ನಲ್ಲಿ ದೇಶಭಕ್ತಿಯ ಆತ್ಮ ಕೊನೆಯುಸಿರೆಳೆದಿದೆ ಎಂದು ಮೋದಿ ಅವರು ವಾಗ್ದಾಳಿ ಮಾಡಿದ್ದಾರೆ.

ವಿದೇಶದಲ್ಲಿ ಕಾಂಗ್ರೆಸ್ ನಾಯಕರು ಭಾರತ ವಿರೋಧಿ ಅಜೆಂಡಾಗಳ ಬಗ್ಗೆ ಮಾತನಾಡಿದ್ದಾರೆ, ಮೀಸಲಾತಿ ರದ್ದುಪಡಿಸುವ ಕುರಿತು ಅಮೆರಿಕದಲ್ಲಿ ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯ ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ ನಡೆಸಿದರು.

ಭ್ರಷ್ಟ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ ಮತ್ತು ಅತ್ಯಂತ ಭ್ರಷ್ಟ ಕುಟುಂಬ ಅದರ ಶಾಹಿ ಪರಿವಾರ ಎಂದು ಪ್ರಧಾನಿ ಮೋದಿ, ಗಾಂಧಿ ಕುಟುಂಬವನ್ನು ಹೆಸರಿಸದೆ ಟೀಕಿಸಿದರು.

 ಗಣಪತಿ ಪೂಜೆಯನ್ನೂ ಕಾಂಗ್ರೆಸ್ ದ್ವೇಷಿಸುತ್ತದೆ. ನಾನು ಗಣೇಶ ಪೂಜೆ ಕಾರ್ಯಕ್ರಮಕ್ಕೆ ಹೋಗಿದ್ದೆ ಮತ್ತು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣಕ್ಕಾಗಿ ಇದನ್ನೂ ಟೀಕಿಸಿದೆ. ಕರ್ನಾಟಕದಲ್ಲಿ ಗಣಪತಿ ಬಪ್ಪನನ್ನು ಕಂಬಿ ಹಿಂದೆ ಹಾಕಲಾಗಿದೆ. ಗಣಪತಿ ಮೂರ್ತಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಹಾಕಲಾಗಿದೆ ಎಂದು ಮೋದಿ ಅವರು ಟೀಕಿಸಿದರು.

ವರ್ಷದ ಕೊನೆಯಲ್ಲಿ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನಡೆಯಲಿದೆ ಮಹಾರಾಷ್ಟ್ರದಲ್ಲಿ, ನಾವು ಅವರ ದ್ವಂದ್ವ ಅರಿತುಕೊಳ್ಳಬೇಕು. ಸುಳ್ಳು ಮತ್ತು ದ್ರೋಹ ಕಾಂಗ್ರೆಸ್‌ಮುಖವಾಗಿದ್ದು, ಮಹಾರಾಷ್ಟ್ರದ ಜನರು ಆ ಪಕ್ಷದ ಬಗ್ಗೆ ಎಚ್ಚರದಿಂದಿರಬೇಕು ಮೋದಿ ಎಚ್ಚರಿಸಿದರು.

 

 

- Advertisement -  - Advertisement - 
Share This Article
error: Content is protected !!
";