ಚಂದ್ರವಳ್ಳಿ ನ್ಯೂಸ್, ರಾಮೇಶ್ವರಂ:
ಪ್ರಧಾನಿ ನರೇಂದ್ರ ಮೋದಿ ಅವರು, ತಮಿಳು ಭಾಷೆಯನ್ನು ಬಲವಾಗಿ ಪ್ರತಿಪಾದಿಸಿ ತಮಿಳು ಭಾಷೆಯನ್ನು ಪ್ರಪಂಚದಾದ್ಯಂತ ಕೊಂಡೊಯ್ಯಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಬಡವರಿಗೆ ಅನುಕೂಲವಾಗುವಂತೆ ತಮಿಳು ಮಾಧ್ಯಮದಲ್ಲೇ ವೈದ್ಯಕೀಯ ಶಿಕ್ಷಣ ನೀಡಬೇಕು ಎಂದು ಭಾನುವಾರ ತಮಿಳುನಾಡು ಸರ್ಕಾರಕ್ಕೆ ಸಲಹೆ ನೀಡಿದರು.
ರಾಮನವಮಿಯಂದು ಒಟ್ಟು 8,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ, ಶ್ರೀರಾಮನ ಉತ್ತಮ ಆಡಳಿತವು ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯ ಎಂದು ಹೇಳಿದರು.
ಹೊಸ ಪಂಬನ್ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ, ಇದು ದೇಶದ ಮೊದಲ ವರ್ಟಿಕಲ್ ಲಿಫ್ಟ್ ರೈಲ್ವೆ ಸಮುದ್ರ ಸೇತುವೆ ಎಂದು ಹೇಳಿದರು.
ತಮಿಳು ಭಾಷೆ, ಪರಂಪರೆಯನ್ನು ಪ್ರಪಂಚದ ಎಲ್ಲಾ ಮೂಲೆಗಳಿಗೆ ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೋದಿ ತಿಳಿಸಿದರು.
ಯಾರ ಹೆಸರನ್ನೂ ಪ್ರಸ್ತಾಪಿಸದೆ, ತಮಿಳುನಾಡು ನಾಯಕರಿಂದ ನನಗೆ ಹಲವು ಪತ್ರಗಳು ಬರುತ್ತವೆ. ಆದರೆ ಅವರು ಯಾರೂ ತಮಿಳಿನಲ್ಲಿ ಸಹಿ ಮಾಡುವುದಿಲ್ಲ ಎಂದು ಮೋದಿ ಪರೋಕ್ಷವಾಗಿ ತಮಿಳುನಾಡು ಸರ್ಕಾರಕ್ಕೆ ಟಾಂಗ್ ನೀಡಿದರು.
ಕನಿಷ್ಠ ಪಕ್ಷ ನಿಮ್ಮ ಸಹಿಯನ್ನಾದರೂ ತಮಿಳಿನಲ್ಲಿ ಮಾಡಿ ಎಂದು ಮೋದಿ ಹೇಳಿದರು.ಇದಲ್ಲದೆ, ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ರಾಜ್ಯದಲ್ಲಿ ತಮಿಳು ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕಲಿಸಬೇಕೆಂದು ಅವರು ಒತ್ತಾಯಿಸಿದರು.