ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೇಂದ್ರ ಎನ್‍ಡಿಎ ಸರ್ಕಾರದಿಂದ ದೇಶದ ಸಾಧನೆ ಆಗಿಲ್ಲ ವೈಯಕ್ತಿಕವಾಗಿ ಅವರಿಗೆ ಲಾಭ ಆಗಿರಬಹುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿಗೆ ನಮ್ಮ ಪ್ರಧಾನಿ ಹೊಂದಿರುವುದಕ್ಕೆ ನಾವು ಸ್ವಾಗತಿಸುತ್ತೇವೆ ಮೆಟ್ರೋ ಯೋಜನೆ ಉದ್ಘಾಟನೆಗೆ ಮೋದಿ ಬಂದಿದ್ದಾರೆ ಅದು ಕರ್ನಾಟಕ ರಾಜ್ಯ ಸರ್ಕಾರದ ಕಾರ್ಯಕ್ರಮ ಯಾರು ಹೆಚ್ಚು ದುಡ್ಡು ಹಾಕಿರುತ್ತಾರೆ ಆ ಬಗ್ಗೆ ಹೇಳಬೇಕು. ರಾಜ್ಯ ಸರ್ಕಾರದ ಮೈಲೇಜ್ ಹೆಚ್ಚಿರಬೇಕು,
ಕೇಂದ್ರದ್ದು ಕಡಿಮೆಯಿದೆ ಮೋದಿ ಅವರಿಗೆ ಮೊದಲಿಂದಲೂ ಫ್ರೀ ಮೈಕೇಜ್ ಸಿಕ್ಕಿದೆ ಒಳಮೀಸಲಾತಿ ಜಾರಿ ಬಗ್ಗೆ ನಮ್ಮ ಸರ್ಕಾರದ ಬದ್ಧತೆ ಇದೆ ಸರ್ವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿ ಮಾಡಲಾಗುವುದೆಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೂ ಪಾಲಿದೆ ಕೇಂದ್ರ ಸರ್ಕಾರ ಕೊಟ್ಟರೂ ಮನೆಯಿಂದ ಏನೂ ಕೊಡಲ್ಲ ನಾವು ಕಟ್ಟಿದ ತೆರಿಗೆ ಹಣವನ್ನೇ ನಮಗೆ ಕೊಡುತ್ತಾರೆ ನಾವು ಕಟ್ಟಿದ ತೆರಿಗೆ ಪಾಲು ಸಹ ಸರಿಯಾಗಿ ಕೊಡುತ್ತಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿ ಕೇಂದ್ರದ ಪರವಾಗಿ ಮಾತಾಡುವವರು ನಮ್ಮ ರಾಜ್ಯದ ಪಾಲು 65ಸಾವಿರ ಕೋಟಿ ಕೊಡಿಸಲಿ ಎಂದರು.
ಬುದ್ಧನ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಆರೋಪ ವಿಚಾರ ದೂರು ನೀಡಿ ಅಥವಾ ದೇಶದ ಕ್ಷಮೆ ಕೇಳಿ ಎಂದು ಚುನಾವಣೆ ಆಯೋಗ ಪ್ರಕಟಣೆ ವಿಚಾರರಾಹುಲ್ ಗಾಂಧಿ ಸಂಸದರು, ಲೋಕಸಭೆ ವಿಪಕ್ಷ ನಾಯಕರು ಪ್ರಮಾಣ ವಚನ ಸ್ವೀಕರಿಸಿಯೇ ಸಂಸದರಾಗಿದ್ದಾರೆ ರಾಹುಲ್ ಗಾಂಧಿ ಅಫಿಡವೆಟ್ ನೀಡುವ ಅಗತ್ಯ ಬರಲ್ಲ ಸಂವಿಧಾನ ತಿಳಿದುಕೊಳ್ಳಲಿ,
ಸಾಂವಿಧಾನಿಕತ್ಮಕ ಹುದ್ದೆ ಬಗ್ಗೆ ಅರಿಯಲಿ ರಾಹುಲ್ ಗಾಂಧಿ ಡಿಜಿಟಲ್ ದಾಖಲೆ ಕೇಳಿದ್ದಾರೆ ಚುನಾವಣೆ ಆಯೋಗ ಏಕೆ ಡಿಜಿಟಲ್ ದಾಖಲೆ ಕೊಡುತ್ತಿಲ್ಲ ಎಂದು ಕಿಡಿ ಕಾರಿದ ಸಚಿವರು ಪ್ರಶ್ನೆ ಮಾಡಿದರೆ ಅಪ್ರಬುದ್ಧ ನಾಯಕರಾಗ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

