ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ಮೋದಿ ಅವರ ‘ಅಚ್ಛೇದಿನ್‘ ಎಂದರೆ ರೂಪಾಯಿ ಮೌಲ್ಯ ಕುಸಿತ, ದೇಶದ ಆರ್ಥಿಕತೆ ಕುಂಠಿತ, ಜಿಡಿಪಿ ಬೆಳವಣಿಗೆಯ ಖಡಿತ! ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ.
ಸ್ವಾತಂತ್ರ್ಯ ನಂತರದ ಭಾರತದಲ್ಲಿ ದಾಖಲೆಯ ಆರ್ಥಿಕ ಬೆಳವಣಿಗೆ ಕಂಡ ಡಾ.ಮನಮೋಹನ್ ಸಿಂಗ್ ಅವರ ಅವಧಿಗೆ ಹೋಲಿಸಿದರೆ, GST, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರಗಳಿಂದ ಭಾರತದ ಜನ ಜೀವನ ದುಸ್ತರವಾಗಿದೆ.
ಮದ್ಯಮ ವರ್ಗದವರು ಬಡವರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ದೇಶ ಮರೆತು ಅದಾನಿಯ ಹಿಂದೆ ಬಿದ್ದ ಪ್ರಧಾನಿಗಳು ದೇಶದ ಆರ್ಥಿಕತೆ, ಜಿಡಿಪಿ, ರೂಪಾಯಿ ಮೌಲ್ಯ ಎಲ್ಲವನ್ನೂ ಮುಳುಗಿಸುತ್ತಿದ್ದಾರೆ! ಎಂದು ಕಾಂಗ್ರೆಸ್ ಟೀಕಿಸಿದೆ.