5 ದಿನ ಮುಂಚಿತವಾಗಿ ಮುಂಗಾರ ಮಳೆ ಆಗಮನ, ಮೇ 13ರ ವರೆಗೆ ಮುಂಗಾರು ಪೂರ್ವ ಮಳೆ ಮುಂದುರಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಸಕ್ತ ಸಾಲಿನ ಮುಂಗಾರು ಮಳೆ ಐದು ದಿನ ಮುಂಚಿತವಾಗಿ ಆರಂಭವಾಗುತ್ತಿದ್ದು
16 ವರ್ಷದ ನಂತರ ಈ ರೀತಿ ಮುಂಚಿತವಾಗಿ ಆರಂಭವಾಗುತ್ತಿದೆ.

2009ರ ಸಾಲಿನ ಮುಂಗಾರು ಮೇ 23ರಂದು ಪ್ರಾರಂಭವಾಗಿತ್ತು. ಪ್ರಸ್ತುತ 2025ರ ಮುಂಗಾರು ಮಳೆ ಮೇ 27ರಂದು ಆರಂಭವಾಗಲಿದೆ. ಮೇ 13ರ ವರೆಗೆ ಮುಂಗಾರು ಪೂರ್ವ ಮಳೆ ಮುಂದುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡದೆ.

ಇದರ ನಡುವೆ ರಾಜ್ಯಕ್ಕೆ ಮುಂಗಾರು ಪ್ರವೇಶವು ಮುಂಚಿತವಾಗಿಯೇ ಪ್ರವೇಶಿಸಲಿದೆ. ಈ ಬಾರಿ ಮುಂಗಾರು ಪೂರ್ವ ಮಳೆಯು ಭರ್ಜರಿಯಾಗಲಿದೆ ಎಂದು ಐಎಂಡಿ ರಿಪೋರ್ಟ್ ಹೇಳಿದೆ.

5 ದಿನ ಮೊದಲೇ ಮುಂಗಾರು ಪ್ರವೇಶ-ಮುಂಗಾರು ಪೂರ್ವ ಮಳೆಯ ಮಧ್ಯೆ ಈ ಬಾರಿ ಮುಂಗಾರು ಬೇಗನೇ ಶುರುವಾಗಲಿದೆ. ಮುಂಗಾರು 5 ದಿನ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

 

Share This Article
error: Content is protected !!
";