ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗದಲ್ಲಿ ಗಮಕ ಕಲಾಭಿಮಾನಿಗಳ ಸಂಘ ಸ್ಥಾಪನೆಯಾಗಿ ನಾಲ್ಕು ದಶಕಗಳು ಸಂದಿರುವ ಸವಿನೆನಪಿಗಾಗಿ ನಡೆಸುತ್ತಿರುವ ಮಾಸಿಕ ಗಮಕ ಸಂಭ್ರಮದ 24ನೇ ಕಾರ್ಯಕ್ರಮವು ಸ್ಥಳೀಯ ವಿಶ್ವ ಹಿಂದೂ ಪರಿಷತ್ತಿನ ನೆರವಿನೊಂದಿಗೆ ಜು.27 ರಂದು ಭಾನುವಾರ ಸಂಜೆ 6 ಗಂಟೆಗೆ ನಗರದ ವಿ.ಪಿ.ಬಡಾವಣೆಯ 3ನೇ ತಿರುವಿನಲ್ಲಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದ ಸಭಾಂಗಣದಲ್ಲಿ(ಅಭಿರಾಮ್ ಕೆಫೆಯ ಹತ್ತಿರ)ನಡೆಯಲಿದೆ.
ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದ ‘ವೀರ ಬಾಹುಕಂಗೆ ಆಳಾದನಾಹರಿಶ್ಚಂದ್ರ‘ಎಂಬ ಭಾಗವನ್ನು ಕುಮಾರಿ ಭಾರ್ಗವಿ ಹಾಗೂ ಕುಮಾರಿ ತನ್ಮಯಿ ವಾಚಿಸಿದರೆ, ಲೇಖಕಿ ಡಾ.ಯಶೋದ ರಾಜಶೇಖರಪ್ಪ, ವ್ಯಾಖ್ಯಾನಿಸುವರು.
ಚಿತ್ರದುರ್ಗ ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಅರುಣಕುಮಾರ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ,ಕಾವ್ಯ ಆಸ್ವಾದಿಸಿ, ಕನ್ನಡದ ಬೆಳವಣಿಗೆಗೆ ಸಹಕರಿಸಲು ಸಂಘದ ಪ್ರಕಟಣೆ ತಿಳಿಸಿದೆ.