ಡಿ.29 ರಂದು ಮಾಸಿಕ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಗಮಕಲಾಭಿಮಾನಿಗಳ ಸಂಘವು ನಡೆಸುತ್ತಿರುವ ಮಾಸಿಕ ಗಮಕ ವಾಚನ ವ್ಯಾಖ್ಯಾನ ಸಂಭ್ರಮದ 17ನೇ ಕಾರ್ಯಕ್ರಮವು ಇದೇ ತಿಂಗಳ 29ರ  ಭಾನುವಾರ ಸಂಜೆ 6 ಗಂಟೆಗೆ ಸರಿಯಾಗಿ ನಗರದ  ಜೆ ಸಿ ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

- Advertisement - 

ಈ ಸಂದರ್ಭದಲ್ಲಿ ಕಲಾವಿದರಾದ ಚಿತ್ರದುರ್ಗ ಮಲ್ಲಾಪುರ ಗೊಲ್ಲರಹಟ್ಟಿಯ   ವೀರಣ್ಣ ಅವರು ವಾಚನ ಮಾಡಲಿದ್ದು ವ್ಯಾಖ್ಯಾನವನ್ನು ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರುಳಿ .ಎಂ .ಬಸವರಾಜ ನೆರವೇರಿಸಲಿದ್ದಾರೆ. ದೇವಿ ಪುರಾಣದ “ಚಂಡ ಮುಂಡ”ರ ಸಂಹಾರ ಎಂಬ ಪ್ರಸಂಗವನ್ನು ಅವರು ನಡೆಸಿಕೊಡಲಿದ್ದಾರೆ.

- Advertisement - 

ಮುಖ್ಯ ಅತಿಥಿಗಳಾಗಿ ಕರ್ನಾಟಕ ರತ್ನಶ್ರೀ ರಾಜ್ಯ ಪ್ರಶಸ್ತಿ ವಿಜೇತರಾದ ಚಿತ್ರದುರ್ಗದ ಸತ್ಯಪ್ರಭಾ ವಸಂತಕುಮಾರ್ ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

- Advertisement - 
Share This Article
error: Content is protected !!
";