ಎಟಿಎಂಗೆ ತುಂಬಿಸಲು ನೀಡಲಾಗಿದ್ದ 1 ಕೋಟಿಗೂ ಅಧಿಕ ಹಣ ಲೂಟಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಟಿಎಂಗೆ ತುಂಬಿಸಲು ನೀಡಲಾಗಿದ್ದ 1 ಕೋಟಿಗೂ ಅಧಿಕ ಹಣವನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಂಚಿಸಲಾಗಿದ್ದು, ಕೋರಮಂಗಲ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಪೇಮೆಂಟ್ ಸರ್ವಿಸ್ ಕಂಪನಿಯೊಂದು ಕೆಲವು ಬ್ಯಾಂಕ್‌ಗಳ ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಪರವಾನಗಿ ಪಡೆದಿತ್ತು. ಆದರೆ ಈ‌ಕೆಲಸ ಮಾಡುತ್ತಿದ್ದ ಪ್ರವೀಣ್, ಧನಶೇಖರ್, ರಾಮಕ್ಕ ಹಾಗೂ ಹರೀಶ್ ಕುಮಾರ್ ಎಂಬ ಆರೋಪಿಗಳು 57 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement - 

ಇದೇ ಕಂಪನಿಯಲ್ಲಿದ್ದ ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬ ಆರೋಪಿಗಳ ಮತ್ತೊಂದು ತಂಡ 80 ಲಕ್ಷ ರೂಪಾಯಿ ವಂಚಿಸಿದೆ ಎಂದು ಆರೋಪಿಸಲಾಗಿದೆ.

ಕಂಪನಿಯ ಪ್ರತಿನಿಧಿಗಳು ನೀಡಿರುವ ದೂರಿನನ್ವಯ ಕೋರಮಂಗಲ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

- Advertisement - 

ದಕ್ಷಿಣ ಕನ್ನಡದಲ್ಲೂ ವಂಚನೆ ಪ್ರಕರಣ:
ಉಪ್ಪಿನಂಗಡಿ ಪೊಲೀಸ್​​​​​​ ಠಾಣಾ ವ್ಯಾಪ್ತಿಯ ಪೆರ್ನೆ ಗ್ರಾಮದ ಬ್ಯಾಂಕ್​​​​​​​​ ಆಫ್​​​​​​​​​ ಬರೋಡಾ ಶಾಖೆಯಲ್ಲಿ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಎಟಿಎಂ ನಗದು ನಿರ್ವಹಣೆಯ ಹೊಣೆಗಾರಿಕೆಯನ್ನು ದುರುಪಯೋಗಪಡಿಸಿಕೊಂಡು
71.41 ಲಕ್ಷ ಮೊತ್ತದ ಭಾರಿ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ದೂರು ದಾಖಲಾಗಿತ್ತು.

 

 

 

Share This Article
error: Content is protected !!
";