ಚಂದ್ರವಳ್ಳಿ ನ್ಯೂಸ್, ವಿಜಯಪುರ:
2025-2027ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಅನುದಾನ ಹಾಗೂ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣಗೊಳ್ಳಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಮುದ್ದೇಬಿಹಾಳ-5, ಬಸವನಬಾಗೇವಾಡಿ-4, ಇಂಡಿ-3, ಸಿಂದಗಿ-3, ವಿಜಯಪುರ ಗ್ರಾಮಾಂತರ-1, ವಿಜಯಪುರ ನಗರ-2, ಚಡಚಣ-1, ನಾಗಠಾಣ-1 ಹೀಗೆ 20 ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣಗೊಳ್ಳಲಿದೆ.
ಬಬಲೇಶ್ವರ ಮತ ಕ್ಷೇತ್ರಕ್ಕೆ ಈ ಬಾರಿ-2 ಹಾಗೂ ಶ್ರೀ ಸಿದ್ದರಾಮಯ್ಯ-2.0 ಸರ್ಕಾರದಲ್ಲಿ ಬಾಬಾನಗರ, ಅರ್ಜುಣಗಿ, ಮಮದಾಪುರ ಸೇರಿದಂತೆ ಒಟ್ಟು 5 ಶಾಲೆಗಳು KPS ಶಾಲೆಗಳಾಗಲಿದೆ.
ಪ್ರತಿ ಶಾಲೆಗೂ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು. ಜೊತೆಗೆ ಉಚಿತ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಿ, ಮಕ್ಕಳನ್ನು ಶಾಲೆಗಳಿಗೆ ಆಕರ್ಷಿಸಲಾಗುವುದು. ಶಿಕ್ಷಣವೇ ಶಕ್ತಿ ಎಂಬುದನ್ನು ಕೇವಲ ಘೋಷವಾಖ್ಯವಾಗಿಸದೆ ಅದನ್ನು ಅನುಷ್ಠಾನಗೊಳಿಸುವತ್ತ ಬದ್ಧತೆಯಿಂದ ನಮ್ಮ ಸರ್ಕಾರ ಮುನ್ನಡೆಯುತ್ತಿದೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

