ತಾಯಿ ಎದೆ ಹಾಲಿನ ಮಹತ್ವ ಅರಿತು ಶಿಶುಗಳಿಗೆ ಸ್ತನ್ಯಪಾನ ಮಾಡಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ಉಪ ಕೇಂದ್ರವಾದ ಮದಕರಿ ನಗರ ಈರಜ್ಜನಹಟ್ಟಿ B ಅಂಡ್ C ಅಂಗನವಾಡಿ ಕೇಂದ್ರದಲ್ಲಿ ಸ್ತಾನ್ಯಪಾನ ಸಪ್ತಾಹ ಕಾರ್ಯಕ್ರಮ ಮಾಡಲಾಯಿತು. ಜಿಲ್ಲಾ ಮಟ್ಟದ ಪೌಷ್ಟಿಕ ಮೇಲ್ವಿಚಾರಕಿ ಸಣ್ಣರಂಗಮ್ಮ ಅವರು ಆಗಮಿಸಿ ಸ್ತನ್ಯ ಪಾನದ ಬಗ್ಗೆ ಗರ್ಭಿಣಿ ಬಾಣಂತಿಯರಿಗೆ ಎದೆ ಹಾಲು ಉಣಿಸುವುದರ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಿದರು.

ತಾಯಿ ಎದೆ ಹಾಲಿನ ಮಹತ್ವ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್‌ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ ಎಂದು ಸಣ್ಣರಂಗಮ್ಮ ತಿಳಿಸಿದರು.

- Advertisement - 

ತಾಯಂದಿರು ಶಿಶುಗಳಿಗೆ ಸ್ತನ್ಯಪಾನ ಮಾಡುವುದರಿಂದ ತುಂಬಾ ಆರೋಗ್ಯವಾಗಿರುತ್ತಾರೆ. ಹಾಲಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಒಂದು ಜಾಗತಿಕ ಆಂದೋಲನವಾಗಿದೆ ಎಂದು ಅವರು ತಿಳಿಸಿದರು.

 ಸ್ತನ್ಯಪಾನದ ಪ್ರಯೋಜನಗಳನ್ನು ತಾಯಂದಿರಿಗೆ ತಿಳಿಸುವುದಲ್ಲದೆ ತಾಯಂದಿರಿಗೆ ಬೆಂಬಲ ಮತ್ತು ಸ್ತನ್ಯಪಾನವನ್ನು ಉತ್ತೇಜಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಸಣ್ಣರಂಗಮ್ಮ ಹೇಳಿದರು.

- Advertisement - 

 ಎದೆಹಾಲು ಮಗುವಿಗೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವುದು. ಸಾರ್ವಜನಿಕ ಸ್ಥಳಗಳಲ್ಲಿ ಸ್ತನ್ಯಪಾನ ಮಾಡಲು ಅನುಕೂಲಕರ ವಾತಾವರಣ ನಿರ್ಮಿಸುವುದು, ಮತ್ತು ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತದೆ ಎಂದು ಸಣ್ಣರಂಗಮ್ಮ ತಿಳಿಸಿದರು.

ಮಗುವಿಗೆ ತಾಯಿಯ ಎದೆ ಹಾಲು ನೀಡುವುದು ಪ್ರತಿ ಅಮ್ಮನ ಜವಾಬ್ದಾರಿ. ಮಗುವಿಗೆ ಎದೆ ಹಾಲು ಉಣಿಸುವರು ಪ್ರಕೃತಿಯ ಅದ್ಭುತವಾದ ವರದಾನ ಎಂದು ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ಅವರು ತಾಯಂದಿರಿಗೆ ಮನದಟ್ಟು ಆಗುವoತೆ ತಿಳಿಸಿದರು.

ಕಾರ್ಯಕ್ರಮದಲ್ಲಿ PHCO ಭಾಗ್ಯಮ್ಮ, ಅಂಗನವಾಡಿ ಕಾರ್ಯಕರ್ತೆ  ಗೌರಮ್ಮ.H, ಹಿಮಬಿಂದು T, ಆಶಾ ಕಾರ್ಯಕಾರ್ತೆ ಶಿಲ್ಪ ಇವರು ಭಾಗವಹಿಸಿದ್ದರು.

Share This Article
error: Content is protected !!
";