ರಾಜಕಾರಣಕ್ಕೆ ಬೇಕಿದೆ ತಾಯಿ ಹೃದಯ-ರಘುಗೌಡ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜಕಾರಣಕ್ಕೆ ಬೇಕಿದೆ ತಾಯಿ ಹೃದಯ. ಪ್ರಜಾಪ್ರಭುತ್ವದ ರಾಜಕೀಯ ಕ್ಷೇತ್ರದಲ್ಲಿ ಪುರುಷರಷ್ಟೇ ಮಹಿಳೆಯರು ಸಾರ್ವಜನಿಕ ನಿರ್ಧಾರಗಳನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಿದ್ದಾರೆ. ಇದಕ್ಕೆ ಸಾಕ್ಷಿ ಗುಡ್ಡೆಯಾಗಿ ಹಲವಾರು ಮಹಿಳಾ ರಾಜಕಾರಣಿಗಳ ವ್ಯಕ್ತಿತ್ವದಲ್ಲಿ ಕಂಡುಬಂದಿವೆ.

ಮಹಿಳೆಯರು ಹಾಗೂ ಪುರುಷರು ಆಡಳಿತಾತ್ಮಕವಾಗಿ ಸಮತೋಲಿತ ನೀತಿಯಲ್ಲಿ ಭಾಗವಹಿಸಲು ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಶೇ.50 ರಷ್ಟು ಮೀಸಲಾತಿ  ಕಲ್ಪಿಸಲಾಗಿದೆ. ಇದು ಪ್ರಭುತ್ವದ ಅಸ್ತಿತ್ವದಲ್ಲಿ ಸಮಾನತೆ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದರು.

ಲೋಕಸಭೆ ಹಾಗೂ ವಿಧಾನಸಭೆಯ  ಸರ್ಕಾರದ ಆಡಳಿತದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಅವಕಾಶ ಮೀಸಲು ನೀಡಬೇಕು ಎಂಬ ಅಂಗೀಕಾರ ಕೇಂದ್ರ ಸರ್ಕಾರದ ಮುನ್ನೆಲೆಯಲ್ಲಿದೆ.

ಚುನಾವಣೆ ಪ್ರಕ್ರಿಯೆ ನೀತಿಯಲ್ಲಿ ಮೀಸಲಾತಿ ಇಲ್ಲದೇ ಮಹಿಳೆಯರು ಪುರುಷರ ಜೊತೆಗೆ ಸ್ಪರ್ಧಿಸಿ ಗೆಲ್ಲುವುದು ಕಷ್ಟವಿದೆ. ಈಗಿನ ರಾಜಕಾರಣದಲ್ಲಿ ಹಣ ಹಾಗೂ ಗುಂಪುಗಾರಿಕೆಯ ಶಕ್ತಿಯ ಕಾರುಬಾರು ಹೆಚ್ಚಾಗಿದೆ. ಯಾವುದೇ ಸ್ಪರ್ಧಾತ್ಮಕ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುವುದು ಕಷ್ಟ ಎಂಬ ಕಾರಣಕ್ಕೆ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸುವ ಮಸೂದೆ ಜಾರಿ ಹಂತದಲ್ಲಿದೆ.

ಪುರುಷ ಪ್ರಧಾನ ದೇಶವಾದ ಭಾರತದಲ್ಲಿ ಸುಮಾರು 40 ವರ್ಷಗಳ ಹಿಂದೆಯೇ ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಮಂತ್ರಿ ಸ್ಥಾನದಲ್ಲಿ 17 ವರ್ಷಗಳ ಕಾಲ ಆಡಳಿತ ನೀಡಿದ ಶ್ರೀಮತಿ ಶ್ರೀ ಇಂದಿರಾಗಾಂಧಿಯವರು ಈ ವಿಚಾರವು ದೇಶದ ಇತಿಹಾಸ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಮಹಿಳೆಯರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಅವರಲ್ಲಿ ಪ್ರಮುಖರು ಮಾಯಾವತಿ, ಜಯಲಲಿತಾ, ಮಮತಾ ಬ್ಯಾನರ್ಜಿ. ದೇಶದಲ್ಲಿ ರಾಷ್ಟ್ರಪತಿ ಸ್ಥಾನ, ಕೇಂದ್ರ ಸರ್ಕಾರಗಳಲ್ಲಿ ಮಂತ್ರಿ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಮಹಿಳೆಯರು. ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸಹಕಾರ ಕ್ಷೇತ್ರದ ಆಡಳಿತದಲ್ಲಿ ಅಧ್ಯಕ್ಷರಾಗಿ ಸದಸ್ಯರಾಗಿ ಮಹಿಳೆಯರು ಸೇವೆ ಸಲ್ಲಿಸಿದ್ದಾರೆ.
ಲೇಖನ-ರಘು ಗೌಡ
9916101265

- Advertisement -  - Advertisement -  - Advertisement - 
Share This Article
error: Content is protected !!
";