ತಾಯಿ ಮಗು ಕಾಣೆ: ಪತ್ತೆಗೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವ್ಯಕ್ತಿಯೋರ್ವ ಹಾಗೂ ತಾಯಿ ಮಗು ಕಾಣೆಯಾದ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಹೊಳಲ್ಕೆರೆ ತಾಲ್ಲೂಕು ಉಗಣೇಕಟ್ಟೆ ನಿವಾಸಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಜಿಲ್ಲೆ ಪುಣಜೂರು ನಿವಾಸಿ ಚಂದ್ರಪ್ಪ ಬಿನ್ ತಿಮ್ಮಭೋವಿ ವಯಸ್ಸು 65 ಕಾಣೆಯಾದ ಕುರಿತು 7 ಜುಲೈ 25 ರಂದು ಪ್ರಕರಣ ದಾಖಲಾಗಿದೆ. ಕಾಣೆಯಾದ ಚಂದ್ರಪ್ಪ 5 ಅಡಿ ಎತ್ತರವಿದ್ದು, ಅಡಿಕೆ ಸುಲಿಯುವ ಕೆಲಸ ಮಾಡುತ್ತಾರೆ.

- Advertisement - 

ತಾಲ್ಲೂಕಿನ ಮುದ್ದಾಪುರ ಲಂಬಾಣಿಹಟ್ಟಿ ಗ್ರಾಮದ ಶಂಕ್ರಮ್ಮ ಗಂಡ ಹನುಮಂತನಾಯ್ಕ್ ವಯಸ್ಸು 26 ಹಾಗೂ ಮಗ ವಿದ್ವಾಂತ್ ವಯಸ್ಸು 1.5 ವರ್ಷ ಕಾಣೆಯಾದ ಕುರಿತು, ಶಂಕ್ರಮ್ಮ ಪತಿ ಹನುಮಂತನಾಯ್ಕ್ 18 ಆಗಸ್ಟ್ 25 ರಂದು ದೂರು ನೀಡಿದ್ದಾರೆ. ಕಾಣೆಯಾದ ಶಂಕ್ರಮ್ಮ 5 ಅಡಿ ಎತ್ತರವಿದ್ದಾರೆ.

ಕಾಣೆಯಾದವರ ಪತ್ತೆಯಾದವರು, ಹೊಳಲ್ಕೆರೆ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ 08191-275233, 9480803151, ಹೊಳಲ್ಕೆರೆ ವೃತ್ತ ನಿರೀಕ್ಷಕರ ಕಛೇರಿ ಸಂಖ್ಯೆ 08191-275376, 9480803135, ಚಿತ್ರದುರ್ಗ ಪೆÇಲೀಸ್ ಉಪಧೀಕ್ಷಕ ಕಛೇರಿ ಸಂಖ್ಯೆ 08194-2224304, ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

- Advertisement - 

 

 

 

Share This Article
error: Content is protected !!
";