ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ತಾಯಿಯ ಎದೆ ಹಾಲಿನ ಮಹತ್ವ ಅರಿತು ಮಕ್ಕಳಿಗೆ ಹೆಚ್ಚಿನ ಹಾಲುಣಿಸಬೇಕು. ತಾಯಿಯ ಎದೆಹಾಲು ಅಮೃತಕ್ಕೆ ಸಮ ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ತಿಳಿಸಿದರು.
ಹೊಸದುರ್ಗ ತಾಲೂಕಿನ ಗುಡ್ಡದ ನೇರಳೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಚಿಕ್ಕ ಬ್ಯಾಲದ ಕೆರೆ ಉಪ ಕೇಂದ್ರ ಅಂಗನವಾಡಿ ಕೇಂದ್ರದಲ್ಲಿ ವಿಶ್ವಸಲ್ಯಪಾನ ಸಪ್ತಾಹ ಕಾರ್ಯಕ್ರಮ ಆಚರಣೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ತಾಯಿಯ ಹಾಲಿನಲ್ಲಿ ಅಸಾಧಾರಣ ರೋಗ ನಿರೋಧಕ ಮತ್ತು ಉರಿಯೂತದ ಗುಣಗಳನ್ನು ಹೊಂದಿರುವ ಜೀವಂತ ವಸ್ತುವಾಗಿದೆ. ಎದೆ ಹಾಲು ತಾಯಂದಿರು ಸೇರಿದಂತೆ ಮಕ್ಕಳನ್ನು ವಿವಿಧ ಕಾಯಿಲೆಗಳು ಮತ್ತು ಅಸ್ವಸ್ಥತೆಗಳ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತ ಎಂದು ಹೇಳಿದರು.
ತಾಯಿಯ ಎದೆ ಹಾಲು ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮಗುವಿಗೆ, ತಾಯಿ ಹಾಲು ಪರಿಪೂರ್ಣ ಪೋಷಣೆಯಾಗಿದೆ.
ತಾಯಿಯ ಎದೆ ಹಾಲು ದೇಹದ ತೂಕವನ್ನು ಉತ್ತೇಜಿಸುತ್ತದೆ ಮತ್ತು ಮಕ್ಕಳಲ್ಲಿ ಸ್ಥೂಲಕಾಯತೆ ತಡೆಯುತ್ತದೆ. ಸ್ತನ್ಯಪಾನ ಮಾಡಿದ ಶಿಶುಗಳು ಸ್ಥೂಲಕಾಯಕ್ಕೆ ಒಳಗಾಗುವ ಸಾಧ್ಯತೆ 15-30% ಕಡಿಮೆ ಎಂದು ಅಧ್ಯಯನಗಳು ತೋರಿಸಿವೆ ಎಂದು ಸಣ್ಣರಂಗಮ್ಮ ತಿಳಿಸಿದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರು ಪಿಎಂಎಸ್ಎನ್ಎ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಪಿ ಡಿ ಓ ರಮೇಶ್, ಹಿರಿಯ ಆರೋಗ್ಯ ಸಹಾಯಕಿ ರೇಣುಕಾ, ಕಿರಿಯ ಆರೋಗ್ಯ ಸಹಾಯಕಿ ಶೋಭಾ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ ಮತ್ತು ಬಾಣಂತಿಯರಿ ಭಾಗವಹಿಸಿದ್ದರು.

