ಗಾಂಧಿಗೆ ಮಾತೃ ವಿಯೋಗ. ಬೆಂಗಳೂರು:ಕೆ ಯುಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸೋಮಶೇಖರ ಗಾಂಧಿ ಅವರ ಮಾತ್ರೋಶ್ರಿ ಬಸವಾಂಬಿಕೆ (76) ಅವರು ಇಂದು ರಾತ್ರಿ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪುತ್ರ ಸೋಮಶೇಖರ ಗಾಂಧಿ ಸೇರಿದಂತೆ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಪ್ರಶಾಂತನಗರದ ಗಾಂಧಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಭಾನುವಾರ ಮದ್ಯಾಹ್ನ 2.30ಕ್ಕೆ ಚಾಮರಾಜಪೇಟೆ ವೀರಶೈವಲಿಂಗಾಯಿತ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಸಂತಾಪ:
ಮಾತ್ರೋಶ್ರಿ ಬಸವಾಂಬಿಕೆ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸೇರಿದಂತೆ ಕೆಯುಡಬ್ಲ್ಯೂಜೆ ಪದಾಧಿಕಾರಿಗಳು, ಸುದ್ದಿಮನೆ ಮಿತ್ರರು ಸಂತಾಪ ವ್ಯಕ್ತಪಡಿಸಿದ್ದಾರೆ.

