ಚಿತ್ರದುರ್ಗ ನಿವಾಸಿಗಳ ಸಂಕಷ್ಟ ಪರಿಹರಿಸಿ: ಸಂಸದ ಗೋವಿಂದ ಎಂ.ಕಾರಜೋಳ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
  ಚಿತ್ರದುರ್ಗ ನಗರದ ೧೮ ಮತ್ತು ೧೯ ವಾರ್ಡಿಗೆ ಹೊಂದಿಕೊಂಡಿರುವ ಮೇದೆಹಳ್ಳಿ ರಸ್ತೆಯ ವಿಜಯನಗರ ಬಡವಾಣೆಯ ಸುಮಾರು ೮೦ ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗುವ ಸಂಭವವಿದ್ದು ಇವರ ಸಂಕಷ್ಟವನ್ನು ಕೂಡಲೇ ಪರಿಹರಿಸಿ ಎಂದು  ವಿಜಯನಗರ ಬಡಾವಣೆ ನಿವಾಸಿಗಳ ಕೋರಿಕೆಯ ಮೇರೆಗೆ ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿಯವರೊಂದಿಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಚಿತ್ರದುರ್ಗ ನಗರಸಭೆ ಆಯುಕ್ತರಾದ ರೇಣುಕಾ ಅವರಿಗೆ ಸಂಸದ ಗೋವಿಂದ ಎಂ.ಕಾರಜೋಳ ಸೂಚನೆ ನೀಡಿದರು.

- Advertisement - 

    ವಿಜಯನಗರ ಬಡಾವಣೆಯಲ್ಲಿರುವ ಸುಮಾರು ೮೦ ಕ್ಕೂ ಹೆಚ್ಚು ಮನಗೆಳನ್ನು ರಸ್ತೆಯ ನೆಪವೊಡ್ಡಿ ನಗರಸಭೆಯವರು ಸುಮಾರು ೧೦ ರಿಂದ ೧೨ ಅಡಿಗಳಷ್ಟನ್ನು ಏಕಾ ಏಕೀ ಒಡೆದುಹಾಕಿದ್ದಾರೆ. ಇದರಿಂದ ೮೦ ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಿವೆ, ಕೆಲವರ ಮನೆಗಳಲ್ಲಿ ಅಡುಗೆ ಮನೆ ಕೆಲವರ ಮನೆಯಲ್ಲಿ ಶೌಚಾಲಯ ಈ ರೀತಿ ನಗರಸಭೆಯವರು ಒಡೆದುಹಾಕಿದ್ದಾರೆ. ಈ ಬಗ್ಗೆ ಸಂಸದರನ್ನು ಭೇಟಿ ಮಾಡಿದ ನಿರಾಶ್ರಿತರು ಸಂಸದರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

- Advertisement - 

ಈ ಕುಟುಂಬಗಳಿಗೆ ಈ ಹಿಂದೆ ಎಂ.ಕೆ.ಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾದಾರ ಚನ್ನಯ್ಯ ಮಠದ ಹಿಂಭಾಗ ಸುಮಾರು ೨ ಎಕರೆ ಜಾಗದಲ್ಲಿ ಈ ಎಲ್ಲಾ ಕುಟುಂಬಗಳಿಗೆ ಪರ್ಯಾಯವಾಗಿ ನಿವೇಶನಗಳನ್ನು ಹಂಚಲಾಗಿತ್ತು, ಆದರೆ ಅವರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲೇ ಇಲ್ಲ, ಎಂ.ಕೆ.ಹಟ್ಟಿ ಗ್ರಾಮ ಪಂಚಾಯತಿಯವರು ಹಂಚಿಕೆ ಮಾಡಲಾದ ಜಾಗ ನಮಗೆ ಸೇರಿದ್ದು ಎಂದು ಖ್ಯಾತೆ ತಗೆದು, ವಿಜಯನಗರ ಬಡಾವಣೆಯ ಜನರಿಗೆ ಹಕ್ಕುಪತ್ರ ಸಿಗದಂತೆ ನೋಡಿಕೊಂಡಿದ್ದಾರೆ ಎನ್ನುವುದು ವಿಜಯ ನಗರ ಬಡಾವಣೆ ನಿವಾಸಿಗಳು ಸಂಸದರ ಎದುರು ಅಳಲು ತೋಡಿಕೊಂಡರು. ಒಟ್ಟಾರೆಯಾಗಿ ವಿಜಯನಗರ ಬಡಾವಣೆ ನಿವಾಸಿಗಳಿಗೆ ವಿಜಯನಗರದಲ್ಲೂ ನೆಮ್ಮದಿಯ ಜೀವನವಿಲ್ಲ, ಅತ್ತ ಎಂ.ಕೆ.ಹಟ್ಟಿ ಗ್ರಾಮ ಪಂಚಾಯತಿಯಿಂದ ಹಂಚಿಕೆ ಮಾಡಿದ ನಿವೇಶನಕ್ಕೂ ಹಕ್ಕುಪತ್ರವಿಲ್ಲದಂತಾಗಿ ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.

    ಒಟ್ಟಾರೆಯಾಗಿ ಇಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಈ ರೀತಿ ಏಕಾಏಕೀ ಮನೆಗಳನ್ನು ಒಡೆದುಹಾಕುವುದು ಖಂಡನೀಯ, ಕೂಡಲೇ ಈ ನಿವಾಸಿಗಳ ಮನೆಗಳನ್ನು ಕೂಡಲೇ ಸರಿಪಡಿಸಿಕೊಡಿ ಅಥವಾ ಈ ಮೊದಲು ಇವರುಗಳಿಗೆ ಹಂಚಿಕೆ ಮಾಡಲಾಗಿದ್ದ ನಿವೇಶನಗಳ ಹಕ್ಕುಪತ್ರಗಳನ್ನಾದರೂ ನೀಡಿ ಎಂದು ತಾಕೀತು ಮಾಡಿದರು.  ಇದನ್ನು ಯಾವ ರೀತಿ ಸರಿಪಡಿಸಿಕೊಡುತ್ತೀರಿ ಎಂದು ನಗರಸಭೆ ಆಯುಕ್ತರನ್ನು ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ಆಯುಕ್ತರು ೨೦ ದಿನಗಳ ಒಳಗಾಗಿ ಆಗಿರುವ ಲೋಪವನ್ನು ಸರಿಪಡಿಸಿ ಅನಾನುಕೂಲತೆಯನ್ನು ಸರಿಪಡಿಸಿಕೊಡುವುದಾಗಿ ಸಂಸದರಿಗೆ ಭರವಸೆ ನೀಡಿದರು.        

- Advertisement - 

 ಸಂಸದರ ಜೊತೆ ಸ್ಥಳ ಪರಿಶೀಲನೆ ವೇಳೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಮುರುಳಿ, ಮುಖಂಡರಾದ ಮಾಧುರಿ ಗಿರೀಶ್, ಇನ್ನು ಅನೇಕರು ಜೊತೆಗಿದ್ದರು.

 

Share This Article
error: Content is protected !!
";