ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್…ಡಿ.ಕೆ ಶಿವಕುಮಾರ್, ಹೆಚ್.ಡಿ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಕಾಳಜಿ ಇರುವ ಕಾರಣಕ್ಕೆ 2 ಬಾರಿ ರೈತರ ಸಾಲ ಮನ್ನಾ ಮಾಡಿದ್ದು. ಅನ್ನದಾತರ ಅಹವಾಲು ಕೇಳಲೆಂದೇ ವಿಧಾನಸೌಧದ ಬಾಗಿಲನ್ನು ಸದಾ ತೆರೆದಿಟ್ಟು ರೈತರೊಂದಿಗೆ ಸಭೆಗಳನ್ನು ನಡೆಸಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
ಹಿಂದಿನ ಭಾರತೀಯ ಕಾಂಗ್ರೆಸ್ ಸರ್ಕಾರ ಒಕ್ಕೂಟ ಸರ್ಕಾರದಲ್ಲಿ ಹೇಗೆ ಆಡಳಿತ ನಡೆಸಿತ್ತು ಎಂದು ತಮಗೆ ಅರಿವಿಲ್ಲವೇ? ಅಥವಾ ಮಂದ ಬುದ್ಧಿಯೇ? ಜಾಣ ಕುರುಡೇ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಸಂಪದ್ಭರಿತವಾಗಿರುವ ಕರ್ನಾಟಕವನ್ನು ದಶಕಗಳ ಕಾಲ ಕರ್ನಾಟಕ ಕಾಂಗ್ರೆಸ್ ಆಳ್ವಿಕೆ ಮಾಡಿ ಕೊಳ್ಳೆ ಹೊಡೆದಿದ್ದೀರಿ, ಈಗಲೂ ಎಟಿಎಂನಂತೆ ಬಳಸಿಕೊಳ್ಳುತ್ತಿದ್ದೀರಿ. ಮೊದಲು ಕರ್ನಾಟಕದಲ್ಲಿ ಲೂಟಿ ಮಾಡುವುದನ್ನು ನಿಲ್ಲಿಸಿ. ಸರ್ಕಾರಿ ಗುತ್ತಿಗೆಯಲ್ಲಿ 60% ಕಮೀಷನ್‌ಪಡೆಯುತ್ತಿರುವುದನ್ನು ನಿಲ್ಲಿಸಿ.
ಬೆಂಗಳೂರಲ್ಲಿ ನಿಮ್ಮ ಕುಟುಂಬದ ಆಸ್ತಿ ವಿಸ್ತರಣೆ ಯೋಜನೆಗಳನ್ನು ನಿಲ್ಲಿಸಿ. ರೌಡಿಸಂ, ಬ್ಲೂಫಿಲ್ಮ್ ದಂಧೆ, ಹನಿಟ್ರಾಪ್‌ದಂಧೆ ನಿಲ್ಲಿಸಿ. ರಾಜಕೀಯ ವ್ಯಭಿಚಾರ ಮಾಡುವುದನ್ನು ನಿಲ್ಲಿಸಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.