ಶ್ರೀ ಜಿಂಗ್ಮೆ ಜುಂಗ್ನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀ ಜಿಂಗ್ಮೆ ಜುಂಗ್ನ…
 ಭಾರತ, ಭೂತಾನ್, ಶ್ರೀಲಂಕಾ, ಮ್ಯಾನ್ಮಾರ್, ಬ್ರುನಲ್ ದರುಸಲಂ,‌ ಕಾಂಬೋಡಿಯಾ, ಲಾಸ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ –  ಪಾಕಿಸ್ಥಾನ ಮ ನೇಪಾಳ ದೇಶಗಳನ್ನು ಹೊರತುಪಡಿಸಿ ಎಲ್ಲ ಸಾರ್ಕ್ ( SAARC) ದೇಶಗಳಿಗೆ ದಲಾಯಿ ಲಾಮಾಜಿಯವರ ಪ್ರತಿನಿಧಿ, ದೇಶ ವಂಚಿತ ಟಿಬೆಟಿಯನ್ ಸರ್ಕಾರದ ‌ನವದೆಹಲಿಯ ಸಂಸತ್ತು ಸದಸ್ಯರು,

ಬ್ಯೂರೋ ಕಛೇರಿ ಕಾರ್ಯದರ್ಶಿಗಳು ಆ.10 ರಂದು ಶ್ರೀ ಮಾದಾರ ಚನ್ನಯ್ಯ ಗುರುಪೀಠದಿದ ನಡೆಯಲಿರುವ ಪೂಜ್ಯ ದಲಾಯಿಲಾಮಾಜಿಯವರ ೯೦ನೇ ಹುಟ್ಟು ಹಬ್ಬದ  ಬಸವ ನಾಡಿನಲ್ಲಿ ಬುದ್ಧ ಸ್ಮರಣೆಕಾರ್ಯಕ್ರಮದಲ್ಲಿ ದಲಾಯಿಲಾಮಾಜಿಯವರ ಪರವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾದಾರ ಚನ್ನಯ್ಯ ಸ್ವಾಮೀಜಿಗಳ ಗುರುಪೀಠ ತಿಳಿಸಿದೆ.

- Advertisement - 

      ೧೯೪೯ರಲ್ಲಿ ಜಿಂಗ್ಮೆ ಜುಂಗ್ನೆ ಅವರು ಜನಿಸಿದ್ದರು. ೧೯೬೨ರಲ್ಲಿ ದೇಶವಂಚಿತರಾಗಿ ಭಾರತಕ್ಕೆ ಬಂದು ಲಡಕ್ ನಲ್ಲಿ ಪುನರ್ ವಸತಿ ಕಂಡುಕೊಂಡರು. ಅಲ್ಲಯೇ ಶಿಕ್ಷಣ ಪಡೆದು ಕರ್ನಾಟಕದ ಬೈಲುಕುಪ್ಪೆ ಪುನರ್ವಸತಿ ಕೇಂದ್ರಕ್ಕೆ ಬಂದು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಅಲ್ಲಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಶಾಲೆಯ ಶಿಕ್ಷಕರಾಗಿ, ಮೊನಾಸ್ಟ್ರಿಯ ಕಾರ್ಯದರ್ಶಿಯಾಗಿ ವಿವಿಧ ಕರ್ತವ್ಯಗಳನ್ನು ನಿರ್ವಹಿಸುತ್ತಲೇ, ವಂಚಿತ ದೇಶ ಟಿಬೆಟ್ಟನ್ನು ಮತ್ತೆ ಸ್ವತಂತ್ರ ದೇಶವಾಗಿ ಪಡೆಯಲು ನಡೆಯುತ್ತಿದ್ದ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು.

ಮುಂದೆ ಬೆಂಗಳೂರಿನಲ್ಲಿರುವ ಅವರ ಪ್ರಾದೇಶಿಕ ಕಛೇರಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿ ೧೯೯೫ರಲ್ಲಿ ಅವರ ಸರ್ಕಾರದ ಅಧಿಕೃತ ನಾಗರಿಕ ಸೇವೆಗೆ ಅಧಿಕಾರಿಯಾಗಿ ನೇಮಕಗೊಂಡು ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಗೃಹ ಇಲಾಖೆ, ಲೆಕ್ಕ ಪರಿಶೋಧನಾ ಇಲಾಖೆಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

- Advertisement - 

ಸೆಪ್ಟೆಂಬರ್ ೧೬, ೨೦೧೧ರಲ್ಲಿ ನವದೆಹಲಿಯಲ್ಲಿರುವ ಪೂಜ್ಯ ಲಾಮಾಜಿಯವರ ನಾಟಕಗಳನ್ನು ಕಛೇರಿಯಲ್ಲಿ ಅವರ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಶ್ರೀಮಠ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 

Share This Article
error: Content is protected !!
";