ಮಿಸ್ಟರ್‌”ಕೆರೆ ಕಳ‍್ಳ”!   

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್‌”ಕೆರೆ ಕಳ‍್ಳ” ! 
@NCheluvarayaS
ಹೆಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುವುದು ನಿಮಗೂ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಅಂಟಿರುವ ಬಾಯಿರೋಗ ಎಂದು ಜೆಡಿಎಸ್ ಟ್ವೀಟ್ ಮಾಡಿ ವಾಗ್ದಾಳಿ ಮಾಡಿದೆ.

ಮಾಕಳಿಯಲ್ಲಿ 70 ಕೋಟಿ ಮೌಲ್ಯದ ಕೆರೆ ನುಂಗಿದ ನೀನೊಬ್ಬ ಖತರ್ನಾಕ್ ಕಳ್ಳ. ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕಾಂಟ್ರ್ಯಾ ಕ್ಟರ್‌ಒಬ್ಬರಿಗೆ ಟಿಕೆಟ್‌ಕೊಡಿಸಿ, ಎಷ್ಟು ಹಣ ಸಂಪಾದಿಸಿದ್ದೀಯಾ ಎಲ್ಲಿರಿಗೂ ಗೊತ್ತು. ನಿನ್ನ ಹಣದಾಹಕ್ಕೆ ಆ ವ್ಯಕ್ತಿಯನ್ನು ಬೀದಿಗೆ ತಂದಿದ್ದೀಯ.

ಕೃಷಿ ಸಚಿವನಾಗಿ ಇಲಾಖೆಯಲ್ಲಿ ಅಕ್ರಮ ವರ್ಗಾವಣೆ ದಂಧೆ, ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ಅಕ್ರಮ, ರೈತರಿಗೆ ಪರಿಹಾರ ಹಣ ಕೊಡದೆ ವಂಚಿಸುತ್ತಿರುವ ವಂಚಕ ಮಂತ್ರಿ ನೀನು. ಮಂಡ್ಯ ಜಿಲ್ಲೆಯಲ್ಲಿ ನಾಲೆಗಳ ಅಭಿವೃದ್ಧಿ ಹೆಸರಲ್ಲಿ ಗುತ್ತಿಗೆದಾರರಿಂದ ಕಮಿಷನ್‌ಪಡೆಯುತ್ತಿರುವ ಲೂಟಿಕೋರ ನೀನು ಎಂದು ಜೆಡಿಎಸ್ ಹಿಗ್ಗಾಮುಗ್ಗಾ ಚೆಲುವರಾಯಸ್ವಾಮಿ ಅವರನ್ನು ಟೀಕಿಸಿದೆ.

 ಇನ್ನು, ವಾಲ್ಮೀಕಿ ನಿಗಮದ ಪರಿಶಿಷ್ಟ ಸಮುದಾಯ 187 ಕೋಟಿ ಹಣವನ್ನು ಲೂಟಿಹೊಡೆದು, ನಿಮ್ಮ ಸಂಪುಟದ ಮಾಜಿ ಮಂತ್ರಿ ನಾಗೇಂದ್ರ  ಜೈಲು ಹಕ್ಕಿಯಾಗಿ ಹೊರ ಬಂದಿದ್ದಾನೆ. ಮುಡಾ ಹಗರಣದ 420, A1 ಆರೋಪಿ ಸಿದ್ದರಾಮಯ್ಯ ಸದ್ಯದಲ್ಲೇ ಜೈಲು ಸೇರುವುದು ಗ್ಯಾರಂಟಿಯಾಗಿದೆ. ನಿಮ್ಮಂತ ಕಡು ಭ್ರಷ್ಟರಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ಜೆಡಿಎಸ್‌ಪಕ್ಷಕ್ಕೆ ಹಣ ಹಂಚಿ ಚುನಾವಣೆ ನಡೆಸುವ ಅವಶ್ಯಕತೆಯೂ ಇಲ್ಲ. ನಿಮ್ಮ ಕಳ್ಳರ ಗುಂಪಿನ ಮತ್ತೊಬ್ಬ ಸಚಿವ ಜಮೀರ್ ಅಹಮದ್ ಖಾನ್ ಸಾರ್ವಜನಿಕವಾಗಿ ಭ್ರಷ್ಟಾಚಾರದ ಹೆಬ್ಬಂಡೆ ಡಿ.ಕೆ.ಶಿವಕುಮಾರ್ ನ ಹಣ ಹಂಚುತ್ತಿರುವ ವಿಡಿಯೋ ಈಗಾಗಲೇ ಎಲ್ಲೆಡೆ ಸುದ್ದಿಯಾಗಿದೆ. ನಿಮ್ಮ ಮಾತುಗಳು “ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ” ಎಂದು ಜೆಡಿಎಸ್ ಟೀಕಿಸಿದೆ.

- Advertisement -  - Advertisement - 
Share This Article
error: Content is protected !!
";