ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್‌ರಾಹುಲ್ ಗಾಂಧಿ ನೀವೇನೂ ಲೋಕಸಭೆ ವಿರೋಧ ಪಕ್ಷದ ನಾಯಕರೋ ? ಬೀದಿ ರೌಡಿಯೋ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ. ನೀವು ಕುಸ್ತಿ ಪಟುವಾಗಿದ್ದರೇ,
ನಿಮ್ಮ ಶಕ್ತಿ ಪ್ರದರ್ಶನವನ್ನು ಕುಸ್ತಿ ಸ್ಪರ್ಧೆಯಲ್ಲಿ ತೋರಿಸಿ. ಅದನ್ನು ಬಿಟ್ಟು ಧರಣಿ ನಡೆಸುತ್ತಿದ್ದ ಹಿರಿಯ ಸಂಸದರಾದ ಶ್ರೀ ಪ್ರತಾಪ್ ಸಾರಂಗಿ ಅವರನ್ನು ತಳ್ಳಿ ಪೌರುಷ ತೋರುವುದಲ್ಲ.
ಹಿರಿಯರಿಗೆ ಅಗೌರವ ತೋರುವುದು, ಅವಮಾನ ಮಾಡುವುದು ಕಾಂಗ್ರೆಸ್‌ಪಕ್ಷದ ಹೀನ ಮನಸ್ಥಿತಿ, ಕಾಂಗ್ರೆಸ್‌ಗೂಂಡಾ ವರ್ತನೆಗೆ ಧಿಕ್ಕಾರ ! ಎಂದು ಜೆಡಿಎಸ್ ಕಿಡಿಕಾರಿದೆ.