ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾದಲ್ಲಿ ಹಗರಣ ನಡೆದೆ ಇಲ್ಲ ಎಂದು ವಾದಿಸುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗ!! ಎಂದು ಬಿಜೆಪಿ ಟೀಕಿಸಿದೆ.
ಸಿಎಂ ಸಿದ್ದರಾಮಯ್ಯ ಅವರು A1 ಆರೋಪಿಯಾಗಿರುವ ಹಗರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) 100 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಂಡಿದ್ದು, ಇದುವರೆಗೂ 400 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಂತಾಗಿದೆ.
ಮೈಸೂರಿನ ಬಡವರ-ಶ್ರಮಿಕರ-ರೈತರ-ದಲಿತರ ಜಮೀನನ್ನು ಕಬಳಿಸಿರುವ ಭ್ರಷ್ಟರೆಲ್ಲರೂ ಒಬ್ಬೊಬ್ಬರಾಗಿ ಜೈಲು ಸೇರುವ ದಿನ ಅತ್ಯಂತ ಹತ್ತಿರದಲ್ಲಿದೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.