ಮುಡಾದ 360 ಪುಟಗಳು ಕಣ್ಮರೆ, ಭ್ರಷ್ಟ ಸಿದ್ದರಾಮಯ್ಯನ ಕಳ್ಳಾಟ ಬಯಲು

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಹುಕೋಟಿ ಮುಡಾ ಹಗರಣದಲ್ಲಿ ಭ್ರಷ್ಟ ಸಿದ್ದರಾಮಯ್ಯನ ಕಣ್ಣಾಮುಚ್ಚಾಲೆ ಕಳ್ಳಾಟಗಳು ಬಯಲಾಗುತ್ತಲೇ ಇದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ. 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2015ರವರೆಗೆ ಹಂಚಿಕೆ ಮಾಡಿರುವ ನಿವೇಶನಗಳನ್ನು ನಮೂದು ಮಾಡಿರುವ ಲೆಡ್ಜರ್‌ಗಳಲ್ಲಿ ಸುಮಾರು 360 ಪುಟಗಳು ಕಾಣೆಯಾಗಿರುವ ಮಾಹಿತಿ ಡೇಟಾಬಿಂಗ್‌ನಲ್ಲಿ ಬಹಿರಂಗವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಮ್ಮ ಪ್ರಭಾವ ಬೀರಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದನ್ನು ಇದು ಪುಷ್ಠೀಕರಿಸಿದೆ. ಮುಡಾ ಹಗರಣ ಬೆಳಕಿಗೆ ಬರುತ್ತಿದ್ದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರಾತ್ರೋರಾತ್ರಿ ಮೈಸೂರಿಗೆ ತೆರಳಿ ಮುಡಾದಲ್ಲಿದ್ದ ದಾಖಲೆಗಳನ್ನು ವಿಶೇಷ ವಿಮಾನದಲ್ಲಿ ಸಾಗಿಸಿದ್ದರು.

ಇನ್ನು ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ED) ಕೂಡ ಸಿಎಂ ಸಿದ್ದರಾಮಯ್ಯ ಮತ್ತು ಇತರರು “ದಾಖಲೆಗಳನ್ನು ತಿರುಚಿದ್ದಾರೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿರುವುದು “ಮಜಾವಾದಿ”ಯ ನಿಜಸ್ವರೂಪ ಬೆತ್ತಲುಗೊಳಿಸುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. 

 

 

Share This Article
error: Content is protected !!
";