ಮುಡಾ ಪ್ರಕರಣ ಬೇರೆಡೆ ಸಳೆಯುವ ವಿಫಲ ಪ್ರಯತ್ನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಾರೋ ದಾರಿಹೋಕನೊಬ್ಬ ಸುಳ್ಳು ದೂರು ಕೊಟ್ಟರೆ ಅದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಿ ಜನರ ಗಮನವನ್ನು ಮುಡಾ ಪ್ರಕರಣದಿಂದ ಬೇರೆಡೆ ಸಳೆಯುವ ವಿಫಲ ಪ್ರಯತ್ನ ಮಾಡುತ್ತಿರುವ ಕಮಂಗಿ ಕರ್ನಾಟಕ ಕಾಂಗ್ರೆಸ್ ಎಂದು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಕಿಡಿ ಕಾರಿದೆ.

ಕೇಂದ್ರ ಸಚಿವರು …, “ಬೀದಿ ನಾಯಿ, ನರಿಗಳಿಗೆಲ್ಲಾ”  ಉತ್ತರ ಕೊಡಬೇಕಾ..? ಕುತಂತ್ರಿಗಳೇ.., ಊಳಿಡುವುದನ್ನು ಬಿಟ್ಟು..   ತಮ್ಮದೇ ಸರ್ಕಾರವಿದೆಯಲ್ಲವೇ ತನಿಖೆ ಮಾಡಿ.

ಸಮಾಜವಾದಿ ಮುಖವಾಡ ತೊಟ್ಟಿರುವ “ಮಜವಾದಿ ಸೈಟ್‌ಕಳ್ಳ”ನ “ದ್ವೇಷ ರಾಜಕಾರಣ”ದ ಮುಂದುವರಿದ ಭಾಗವಿದು.! ಎಂದು ಜೆಡಿಎಸ್ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದೆ.

ಸಿಎಂ ಕುರ್ಚಿಗೆ ಟವೆಲ್‌ಹಾಕಿರುವ ರೌಡಿ ಕೊತ್ವಾಲನ ಶಿಷ್ಯನ ಕುತಂತ್ರವೂ ಸದ್ಯದಲ್ಲೇ ಹೊರ ಜಗತ್ತಿಗೆ ತಿಳಿಯಲಿದೆ. ದಾರಿಹೋಕನ ಹಿಂದಿರುವ ಸರ್ಕಾರದ ತನಿಖಾ ಸಂಸ್ಥೆಯ ಮುಖ್ಯಸ್ಥನ ಮುಖವಾಡ ಸದ್ಯದಲ್ಲೇ ಕಳಚಿ ಬೀಳಲಿದೆ ಎಂದು ಜೆಡಿಎಸ್ ಭವಿಷ್ಯ ನುಡಿದಿದೆ.

 

- Advertisement -  - Advertisement - 
Share This Article
error: Content is protected !!
";