ರಾಜ್ಯ ಸರ್ಕಾರಿ ನೌಕರರ ಸಂಘದ ಹಬ್ಬಕ್ಕೆ ಮುಹೂರ್ತ್ ಫಿಕ್ಸ್

News Desk

ರಾಜ್ಯ ಸರ್ಕಾರಿ ನೌಕರರ ಸಂಘದ ಹಬ್ಬಕ್ಕೆ ಮುಹೂರ್ತ್ ಫಿಕ್ಸ್
ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದ 2024 – 2029 ನೇ ಅವಧಿಯ ಚುನಾವಣೆ ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
ತಾಲೂಕು ಶಾಖೆ, ಯೋಜನಾ ಶಾಖೆ, ಜಿಲ್ಲಾ ಶಾಖೆಗಳ ನಿರ್ದೇಶಕರುಗಳು –ಪದಾಧಿಕಾರಿಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯರ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳ ಚುನಾವಣೆಗಳು ನಡೆಯಲಿವೆ. ವೇಳಾಪಟ್ಟಿಯ ವಿವರ ಈ ಕೆಳಕಂಡಂತಿದೆ.

ಚುನಾವಣಾ ವಿವರ: ತಾಲೂಕು ಶಾಖೆ ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನದ ಚುನಾವಣೆಗಳು ದಿನಾಂಕ 9-10-2024 ರಿಂದ 28-10-2024 ರವರೆಗೆ ನಡೆಯಲಿವೆ.
ತಾಲೂಕು ಶಾಖೆಗಳ ತಾಲೂಕು ಅಧ್ಯಕ್ಷರು, ಯೋಜನಾ ಶಾಖೆಗಳ ಅಧ್ಯಕ್ಷರು, ತಾಲೂಕು ಯೋಜನಾ ಶಾಖೆಗಳ ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳು ದಿನಾಂಕ 30-10-2024 ರಿಂದ 16-11-2024 ರವರೆಗೆ ನಡೆಯಲಿವೆ.

ಜಿಲ್ಲಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆಗಳು ದಿನಾಂಕ 28-10-2024 ರಿಂದ 16-11-2024 ರವರೆಗೆ ನಡೆಯಲಿವೆ.
ಜಿಲ್ಲಾ ಶಾಖೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳು ದಿನಾಂಕ 19-11-2024 ರಿಂದ 4-12-2024 ರವರೆಗೆ ನಡೆಯಲಿವೆ.

ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯರ ಮತ ಕ್ಷೇತ್ರವಾರು ಚುನಾವಣೆಗಳು ದಿನಾಂಕ 17-9-2024 ರಿಂದ 4-12-2024 ರವರೆಗೆ ನಡೆಯಲಿವೆ.

ರಾಜ್ಯ ಸಂಘದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆಗಳು ದಿನಾಂಕ 9-12-2024 ರಿಂದ 27-12-2024 ರವರೆಗೆ ನಡೆಯಲಿವೆ.

- Advertisement -  - Advertisement - 
Share This Article
error: Content is protected !!
";