ಒಂದು ಸುಂದರ ದೆವ್ವದ ಕಥೆ ಚಿತ್ರಕ್ಕೆ 23ರಂದು ಮುಹೂರ್ತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಒಂದು ಸುಂದರ ದೆವ್ವದ ಕಥೆ” ಚಿತ್ರಕ್ಕೆ 23ರಂದು ಮುಹೂರ್ತ..
ಒಂದೇ ಸಿನಿಮಾದಲ್ಲಿ ಸಾಹಸ ನಿರ್ದೇಶಕ ನಾಯಕ
, ನೃತ್ಯಸಂಯೋಜಕ ನಿರ್ದೇಶಕ…
ಭಾನು ಪೃಥ್ವಿ
100 ಮಾರ್ಕ್ಸ್ ಫಿಲಂಸ್ ಲಾಂಛನದಲ್ಲಿ ಶೋಭಾವತಿ ಕಪಿಲ್ ಅವರು ನಿರ್ಮಿಸುತ್ತಿರುವ ಆರ್. ಲಕ್ಷ್ಮಿ ನಾರಾಯಣ ಗೌಡ ಅರ್ಪಿಸುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರ ನಿರ್ದೇಶನದ ಚಿತ್ರ “ಒಂದು ಸುಂದರ ದೆವ್ವದ ಕಥೆ”.

- Advertisement - 

      ಈ ಹಿಂದೆ ದಾಸರಹಳ್ಳಿ, ಬಿಡುಗಡೆಗೆ ಸಿದ್ದವಾಗಿರುವ ದೇವದೂತ ಚಿತ್ರಗಳ ನಿರ್ದೇಶಕ ಕಪಿಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 10ನೇ ಚಿತ್ರ ಇದಾಗಿದೆ.

- Advertisement - 

 ಟೈಟಲ್ ನಷ್ಟೇ ಕುತೂಹಲಕಾರಿ ಹಾಗೂ ವಿಭಿನ್ನ ಕಥಾವಸ್ತು ಒಳಗೊಂಡ ಈ ಚಿತ್ರದಲ್ಲಿ ಇದೇ ಮೊದಲಬಾರಿಗೆ ನಾಯಕ ನಟರಾಗಿ ಸಾಹಸ ನಿರ್ದೇಶಕ‌ ಕೌರವ ವೆಂಕಟೇಶ್ ಅಭಿನಯಿಸುತ್ತಿದ್ದಾರೆ. ಇದೇ ತಿಂಗಳ 23ರಿಂದ ಚಿತ್ರೀಕರಣ ಆರಂಭಿಸಿ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಶೂಟಿಂಗ್ ನಡೆಸಲಾಗುವುದು.  

   ಆರು ಜ‌ನ ಪ್ರತಿಭಾವಂತ ಹೆಣ್ಣುಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ನಿಮಗೆ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆಂದು ನಂಬಿಸಿ ಮೋಸ ಮಾಡುತ್ತಾರೆ. ಅದೇ ಕಾಲೋನಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ನಾಯಕ ಈ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುತ್ತಾನೆ. ಹೀಗೆ ಕುತೂಹಲಕರ ಕಥಾಹಂದರ ಒಳಗೊಂಡ ಒಂದು ಸುಂದರ ದೆವ್ವದ ಕಥೆ ಚಿತ್ರದಲ್ಲಿ ಇದೇ ಮೊದಲಬಾರಿಗೆ ಒಬ್ಬ ಸಾಹಸ ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕ ನಾಯಕ, ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ.

- Advertisement - 

 ಸಾಯಿ ಕೃಷ್ಣ ಹೆಬ್ಬಾಳ ಅವರ ಚಿತ್ರಕಥೆ, ಸಂಭಾಷಣೆ, ಹರ್ಷ ಕೊಗೋಡ್ ಅವರ ಸಂಗೀತ, ಶಂಕರ್ ಆರಾಧ್ಯ ಅವರ ಛಾಯಾಗ್ರಹಣ, ವಿನಯ್. ಜಿ. ಆಲೂರು ಅವರ ಸಂಕಲನ, ಶರಣ್ ಗದ್ವಾಲ್ ಅವರ ತಾಂತ್ರಿಕ  ನಿರ್ದೇಶನ ಈ ಚಿತ್ರಕ್ಕಿದೆ.

   ಕೌರವ ವೆಂಕಟೇಶ್, ಕೆ.ಟಿ. ಮುನಿರಾಜ್, ಆರ್. ಲಕ್ಷ್ಮೀನಾರಾಯಣಗೌಡ, ಗುರು ಪ್ರಸಾದ್, ಸುರೇಶ್ ಮುರಳಿ, ವಿ. ಸಿ.ಎನ್. ಮಂಜುವಿಕ್ಟರಿ ದಯಾಲನ್, ನಾರಾಯಣಸ್ವಾಮಿ, ವಿಕ್ಟರಿ ವಾಸು, ಶಂಕರ್ ಭಟ್, ಪ್ರೇಮ್ ಪಾವಗಡ ಸೇರಿದಂತೆ  ಸಾಕಷ್ಟು ಜನ ರಂಗಕಲಾವಿದರುಗಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

 

Share This Article
error: Content is protected !!
";