ಮುಂಬೈ-ಪುಣೆ-ಬೆಂಗಳೂರು ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಂಬೈ-ಪುಣೆ-ಬೆಂಗಳೂರು ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಯು ನಮ್ಮ ರಾಜ್ಯಕ್ಕೆ ಬಹಳ ಮಹತ್ವದ್ದು. ಅದರಲ್ಲಿಯೂ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ ಅಭಿವೃದ್ಧಿಗೆ ಅನುಕೂಲವಾಗುವ ಈ ಯೋಜನೆಯು ನಮ್ಮ ಜನತೆಗೆ ಅತ್ಯಗತ್ಯ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ನಮ್ಮ ಒತ್ತಡ-ಬೇಡಿಕೆಗೆ ಸ್ಪಂದಿಸಿ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಪ್ರಹ್ಲಾದ್ ಜೋಶಿ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು.

- Advertisement - 

ಈ ಯೋಜನೆಯು ಕೇವಲ ಮನವಿ-ಚರ್ಚೆಗೆ ಸೀಮಿತವಾಗದೆ, ಶೀಘ್ರದಲ್ಲಿ ಕಾರ್ಯಗತವಾಗಬೇಕು ಎಂದು ಸಚಿವರು ತಾಕೀತು ಮಾಡಿದ್ದಾರೆ.

ರಾಜ್ಯವನ್ನು ಪ್ರತಿನಿಧಿಸುವ ಎಲ್ಲಾ ಸಂಸದರು, ಕೇಂದ್ರ ಸಚಿವರು ಈ ಯೋಜನೆಯ ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಎಂ.ಬಿ ಪಾಟೀಲ್ ಆಗ್ರಹ ಮಾಡಿದ್ದಾರೆ.

- Advertisement - 

 

Share This Article
error: Content is protected !!
";