ನಗರಸಭೆ ಬಿಜೆಪಿ ಜೆಡಿಎಸ್ ಮೈತ್ರಿ ಮಡಿಲಿಗೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಶಾಸಕ ಧೀರಜ್ ಮುನಿರಾಜ್ ಹೆಣೆದ ತಂತ್ರಗಾರಿಕೆಯ ಫಲವಾಗಿ
  ದೊಡ್ಡಬಳ್ಳಾಪುರ ನಗರಸಭೆ ಅಧಿಕಾರ ಬಿ.ಜೆ.ಪಿ ಮೈತ್ರಿಕೂಟಕ್ಕೆ ಸಿಕ್ಕಿದೆ, 33 ಮತ ಗಳಲ್ಲಿ 23 ಮತಗಳನ್ನ ಪಡೆದ ಮೈತ್ರಿಕೂಟ ಮತ್ತೊಮ್ಮೆ ನಗರಸಭೆಯ ಅಧಿಕಾರವನ್ನು ಹಿಡಿಯುವಲ್ಲಿ ಸಫಲವಾಗಿದೆ.

 ದೊಡ್ಡಬಳ್ಳಾಪುರ ನಗರಸಭೆಯ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾದ ಸುಮಿತ್ರಾ ಆನಂದ್ ಅಧ್ಯಕ್ಷರಾಗಿ, ಜೆಡಿಎಸ್ ಸದಸ್ಯರಾದ ಮಲ್ಲೇಶ್ ಉಪಾಧ್ಯಕ್ಷರಾಗಿ ತಲಾ 23 ಮತಗಳನ್ನು ಪಡೆಯುವ ಮೂಲಕ  ಆಯ್ಕೆಯಾಗಿದ್ದು, ಎರಡನೇ ಅವಧಿಗೂ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಮುಂದುವರೆದಿದೆ.

 ದೊಡ್ಡಬಳ್ಳಾಪುರ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು, ಅಧ್ಯಕ್ಷ ಸ್ಥಾನಕ್ಕಾಗಿ  ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಸುಮಿತ್ರಾ ಆನಂದ್ ಸ್ಪರ್ದಿಸಿದ್ದರು.ಕಾಂಗ್ರೆಸ್ ರೂಪಿಣಿ ಮಂಜುನಾಥ್ ಸ್ಪರ್ದಿಸಿದ್ದರು, ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲೇಶ್, ಕಾಂಗ್ರೆಸ್‌ನ ನಿಂದ ಆನಂದ್ ಸ್ಪರ್ದಿಸಿದ್ದರು. 

 23 ಸ್ಥಾನಗಳನ್ನ ಪಡೆದ ಸುಮಿತ್ರಾ ಆನಂದ್ ಅಧ್ಯಕ್ಷರಾಗಿ, ಹಾಗೆಯೇ 23 ಮತಗಳನ್ನ ಪಡೆದ ಮಲ್ಲೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು, ಕಾಂಗ್ರೆಸ್ ನಿಂದ ಸ್ಪರ್ದಿಸಿದ್ದ ರೂಪಿಣಿ ಮಂಜುನಾಥ್ ಮತ್ತು ಆನಂದ್ 10 ಮತಗಳನ್ನ ಪಡೆಯುವ ಮೂಲಕ ಪರಾಭವಗೊಂಡರುಸಂಸದರಾದ ಡಾ.ಕೆ.ಸುಧಾಕರ್ ಮತ್ತು ಶಾಸಕರಾದ ಧೀರಜ್ ಮುನಿರಾಜು ವಿಜಯಶಾಲಿಗಳಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನ ಅಭಿನಂದಿಸಿದರು.

 ನಗರಸಭೆಯ ಅಧಿಕಾರವನ್ನ ಯಾವ ಕಾರಣಕ್ಕೂ ಬಿಟ್ಟುಕೊಡಲು ಸಿದ್ದರಿಲ್ಲದ ಶಾಸಕ ಧೀರಜ್ ಮುನಿರಾಜು  ನಗರಸಭೆ ಅಧಿಕಾರ ಹಿಡಿಯಲು ತಂತ್ರಗಾರಿಕೆಯನ್ನು ರೂಪಿಸಿದ್ದರು, ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಸೇರಿದ ಶಿವಶಂಕರ್ ಮತ್ತು ಶಿವಣ್ಣರವರಿಗೆ ರಾಜ್ಯ ಬಿಜೆಪಿ ಘಟಕದಿಂದ ವಿಪ್ ಜಾರಿ ಮಾಡುವ ಮೂಲಕ ಪಕ್ಷಾಂತರಗೊಂಡಿದ್ದ ಸದಸ್ಯರಿಗೆ ಪೆಟ್ಟು ನೀಡಿದರು, ವಿಪ್ ಪಡೆದ  ಶಿವಶಂಕರ್ ಮತ್ತು ಶಿವಣ್ಣ ಬಿಜೆಪಿಗೆ ಮತ ಹಾಕುವ ಅನಿರ್ವಾಯತೆ ಸೃಷ್ಠಿಯಾಗಿತು.

ಇನ್ನೂ ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ ಎಂ.ಜಿ.ಶ್ರೀನಿವಾಸ್ ಸಹ ವಿಪ್ ಉಲ್ಲಂಘಿಸಿ ಬಿಜೆಪಿಗೆ ಮತ ಹಾಕಿದರು, ಸಂಸದರು, ಶಾಸಕರ ಮತಗಳು ಸೇರಿದಂತೆ ಒಟ್ಟು 23 ಮತಗಳನ್ನ ಪಡೆದ ಜೆ.ಡಿ.ಎಸ್   ಮೈತ್ರಿಕೂಟ ಸುಲಭವಾಗಿ ಅಧಿಕಾರ ಹಿಡಿಯಿತು.

  

- Advertisement -  - Advertisement -  - Advertisement - 
Share This Article
error: Content is protected !!
";