ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ರೈಲ್ವೆ ಸ್ಟೇಷನ್ ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಸ್ ಇಲ್ಲದೆ ಅಪಘಾತಗಳ ತಾಣವಾಗಿದೆ, ರಸ್ತೆ ಅಪಘಾತಗಳಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ, ಟ್ರಾಫಿಕ್ ಸಿಗ್ನಲ್ ಲೈಟ್ಸ್ ಹಾಕಿಸುವಂತೆ ಶಾಸಕರಾದ ಧೀರಜ್ ಮುನಿರಾಜುರವರಿಗೆ ಸಿದ್ದೇನಾಯಕನಹಳ್ಳಿ ನಗರಸಭಾ ಸದಸ್ಯರಾದ ಇಂದ್ರಾಣಿ.ವಿ ಮನವಿ ಮಾಡಿದ್ದಾರೆ.
ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಸರ್ಕಲ್ ಪ್ರಮುಖ ಸ್ಥಳವಾಗಿದೆ, ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ 9, ದೊಡ್ಡಬಳ್ಳಾಪುರ ನಗರಕ್ಕೆ ಸಂಪರ್ಕಿಸುವ ರಸ್ತೆ, ರೈಲ್ವೆ ನಿಲ್ದಾಣ, ಅಪರೆಲ್ ಪಾರ್ಕ್ ಮತ್ತು ದೇವನಹಳ್ಳಿ ಮಾರ್ಗದ ರಸ್ತೆ ಇದೇ ಸರ್ಕಲ್ ಮೂಲಕ ಹಾದು ಹೋಗುವೆ, ಪ್ರತಿದಿನ ಸಾವಿರಾರು ವಾಹನಗಳು ಸಂಚಾರಿಸುವ ಪ್ರಮುಖ ಸರ್ಕಲ್ ಆಗಿದೆ.
ರೈಲ್ವೆ ಸ್ಟೇಷನ್ ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಸ್ ಇಲ್ಲದೆ ಇರುವುದರಿಂದ ಪದೇ ಪದೇ ರಸ್ತೆ ಅಪಘಾತಗಳು ಈ ಸ್ಥಳದಲ್ಲಿ ಸಂಭವಿಸುತ್ತಿವೆ, ರಸ್ತೆ ಅಪಘಾತಗಳಿಂದ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ, ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಹಾಕುವಂತೆ ಶಾಸಕರಾದ ಧೀರಜ್ ಮುನಿರಾಜುರವರಿಗೆ ಮನವಿ ಮಾಡಿದ್ದಾರೆ.