ಪಾರ್ಕ್ ಅಭಿವೃದ್ದಿಗೆ ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್‌ ಭೂಮಿ ಪೂಜೆ 

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆನೆಬಾಗಿಲು ಬಳಿ ನಗರಸಭೆಯ ಅನುದಾನ ೩೦ ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಅಭಿವೃದ್ದಿ ಕಾಮಗಾರಿಗೆ ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ನಗರಸಭೆ ಅನುದಾನದಲ್ಲಿ ಕೈಗೊಳ್ಳುವ ಈ ಕಾಮಗಾರಿಯ ಜೊತೆ ಪುರಾತನವಾದ ಆನೆಬಾಗಿಲು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ದಿಪಡಿಸಲು ೩೦ ರೂ.ಗಳನ್ನು ಖರ್ಚು ಮಾಡಲಾಗುವುದೆಂದು ಅನಿತಾ ರಮೇಶ್ ತಿಳಿಸಿದರು.

- Advertisement - 

ನಗರಸಭೆ ಸದಸ್ಯ ಜೆ.ಶಶಿಧರ್, ಮಾಜಿ ಸದಸ್ಯ ಟಿ.ರಮೇಶ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದ್ರಿನಾಥ್, ವೇದಪ್ರಕಾಶ್‌ಬಾಬಣ್ಣ, ನಾಗರಾಜ್‌ಬೇದ್ರೆ, ಗೋಪಾಲ್‌ರಾವ್ ಜಾಧವ್, ಶ್ಯಾಂಪ್ರಸಾದ್, ಬಾಬುಲಾಲ್‌ಜೈನ್, ಶ್ರೇಣಿಕ್, ಜ್ಯೋತಿ ಲಕ್ಷ್ಮಣ್, ನಗರಸಭೆ ಪೌರಾಯುಕ್ತೆ ಲಕ್ಷ್ಮಿ, ಇಂಜಿನಿಯರ್‌ಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

- Advertisement - 

 

 

 

Share This Article
error: Content is protected !!
";