ಆಸ್ತಿ ತೆರಿಗೆ ಹೆಚ್ಚಿಸಿದ ನಗರಸಭೆ: ಏ.30ರೊಳಗೆ ಕಟ್ಟಿದರೆ ಶೇ.5ರಷ್ಟು ರಿಯಾಯಿತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಸಭೆ ಅಧ್ಯಕ್ಷರ ನೇತೃತ್ವದ ಕೌನ್ಸಿಲ್ ಸಭೆ 2025-26ನೇ ಸಾಲಿನ ಮೂಲ ಆಸ್ತಿ ತೆರಿಗೆ ಮೇಲೆ ವಾಸಯೋಗ್ಯ ಮತ್ತು ಖಾಲಿ ನಿವೇಶನಗಳಿಗೆ ಶೇ.3 ರಷ್ಟು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಶೇ.4 ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಅನುಮೋದನೆ ನೀಡಿದೆ.

 ಈ ತೆರಿಗೆಯನ್ನು ಏಪ್ರಿಲ್ 1 ರಿಂದ ಜಾರಿ ಮಾಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಸಾರ್ವಜನಿಕರು ಏಪ್ರಿಲ್ 30ರ ಒಳಗೆ ಆಸ್ತಿ ತೆರಿಗೆ ಪಾವತಿಸಿದರೆ, ಆಸ್ತಿ ತೆರಿಗೆ ಪಾವತಿ ಮೇಲೆ ಶೇ.5 ರಷ್ಟು ರಿಯಾಯಿತಿ ದೊರೆಯಲಿದೆ. ಈ ಅವಕಾಶವನ್ನು ಬಳಿಸಿಕೊಂಡು ಆಸ್ತಿ ತೆರಿಗೆ ಪಾವತಿಸಿ, ನಗರದ ಅಭಿವೃದ್ಧಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಪೌರಾಯುಕ್ತರು ಕೋರಿದ್ದಾರೆ.

Share This Article
error: Content is protected !!
";