ಮಳೆ ಆರ್ಭಟಕ್ಕೆ ಎಚ್ಚೆತ್ತುಕೊಂಡ ನಗರಸಭೆ

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಹಿರಿಯೂರು ನಗರದಾದ್ಯಂತ ಸತತವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆ ಆರ್ಭಟಕ್ಕೆ ತಲ್ಲಣಗೊಂಡ ಸಿಎಂ ಲೇಔಟ್ ಸೇರಿದಂತೆ ಮತ್ತಿತರ ಬಡಾವಣೆಗಳಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಠಿಸಿದ್ದು ನಗರಸಭೆಯವರು ತಕ್ಷಣ ಎಚ್ಚೆತ್ತುಕೊಂಡ ತಡರಾತ್ರಿ ಜನಪ್ರತಿನಿಧಿಗಳು ಅಧಿಕಾರಿಗಳು ಪೌರಕಾರ್ಮಿಕರು ಜೆಸಿಬಿ ಮೂಲಕ ನೀರು ಹೊರಗೆ ಹೋಗುವಂತ ವ್ಯವಸ್ಥೆ ಕಲ್ಪಿಸಿದ್ದಾರೆ.

ಮರುದಿನ ಬೆಳಿಗ್ಗೆಯಿಂದಲೇ ನಗರಸಭೆ ಪೌರಾಯುಕ್ತರು ಆರೋಗ್ಯ ನಿರೀಕ್ಷಕರು ಪೌರಕಾರ್ಮಿಕರು ಸೇರಿ ಹಿಟಾಚಿ ಮತ್ತು ಜೆಸಿಬಿಗಳನ್ನು ಬಳಸಿ ರಾಜಕಾಲುವೆಯಲ್ಲಿ ಹೂಳು, ಕಸ, ಕಡ್ಡಿ ಸೇರಿದಂತೆ ಇತರೆ ಘನ ತ್ಯಾಜ್ಯವನ್ನು ತೆಗೆಯುವ ಮೂಲಕ ಸರಾಗವಾಗಿ ನೀರು ಹೋಗುವಂತೆ ಮಾಡಿದ್ದಾರೆ.

- Advertisement - 

ಒಂದು ವಾರದಿಂದಲೂ ರಾಜಕಾಲುವೆಯನ್ನು ಸ್ವಚ್ಛಗೊಳಿಸಿ ಮುಂದೆ ಅನಾಹುತ ಆಗದೆ ಬಿದ್ದ ಮಳೆ ನೀರು ಸರಾಗವಾಗಿ ರಾಜ ಕಾಲುವೆ ಮೂಲಕ ಹರಿದು ಹೋಗುವಂತೆ ಸ್ವಚ್ಛಗೊಳಿಸಲಾಗಿದೆ.

ಶಾಶ್ವತವಾಗಿ ರಾಜಕಾಲುವೆ ಅಗಲೀಕರಣವಾಗಬೇಕಾಗಿದೆ ಮುಂದೊಂದು ದಿನ ಅನಾಹುತ ಆಗುವುದರಲ್ಲಿ ಸಂಶಯವೇ ಇಲ್ಲ. ಮುಂದಾಗುವ ಅನಾಹುತಗಳನ್ನು ತಡೆಯಬೇಕಾದರೆ ಅಲ್ಲಿರುವ ಸಮಸ್ಯೆಗೆ ಪರಿಹಾರ ಕಂಡುಕೊಂಡು ಮಳೆ ಬಂದಾಗ ಸಮಸ್ಯೆ ಆಗದಂತೆ ಎಚ್ಚೆತ್ತುಕೊಳ್ಳಬೇಕಾಗಿದೆ.

- Advertisement - 

ನೂತನವಾಗಿ ಬಡಾವಣೆ ನಿರ್ಮಾಣ ಮಾಡುತ್ತಿರುವವರು ಎಗ್ಗಿಲ್ಲದೆ ರಾಜಕಾಲುವೆ ಒತ್ತುವರಿ ಮಾಡಿ ಅಕ್ರಮವಾಗಿ ಅವರದಲ್ಲದ ಜಾಗವನ್ನು ಮಾರಾಟ ಮಾಡುತ್ತಿದ್ದಾರೆ. ರಾಜಕಾಲುವೆ, ವೇದಾವತಿ ನದಿ ತಟದಲ್ಲಿ ಎಷ್ಟು ಬಫರ್ ಝೋನ್ ಇದೆ ಎನ್ನುವುದರ ಅಳತೆ ಮಾಡಿ ಟ್ರಂಚ್ ಹೊಡೆಸುವ ಮೂಲಕ ಒತ್ತುವರಿದಾರರಿಗೆ ನಗರಸಭೆ ಸೇರಿದಂತೆ ತಾಲೂಕು ಆಡಳಿತ ಕಡಿವಾಣ ಹಾಕಬೇಕಿದೆ. ಎಲ್ಲಾದರೂ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಬಂದ ನೀರು ಸರಾಗವಾಗಿ ಹರಿದರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ರಾಜಕಾಲುವೆ ಶಾಶ್ವತವಾಗಿ ಅಗಲೀಕರಣವಾಗಬೇಕಾಗಿದೆ. ಮಳೆ ಜಾಸ್ತಿಯಾದರೆ ನೀರು ರಸ್ತೆಗೆ ಮನೆಗಳಿಗೆ ನುಗ್ಗುವ ಪರಿಸ್ಥಿತಿ ಬರಬಹುದು  ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆ ವತಿಯಿಂದ ಸ್ವಚ್ಛಗೊಳಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಭೇಟಿ ನೀಡಿ ರಾಜಕಾಲುವೆ ಒತ್ತುವರಿ ಮಾಡಿದವರಿಗೆ ತಕ್ಷಣ ನೋಟಿಸ್ ಜಾರಿ ಮಾಡಿ ಎಂದು ನಗರ ಸಭೆಯ ಪೌರಾಯುಕ್ತರುಗೆ ಸೂಚಿಸಿದ್ದರು. ಮುಂಜಾಗ್ರತೆಯಾಗಿ ಮುಂದೆ ಇಂತಹ ಅನಾಹುತಗಳಾಗದಂತೆ ಎಚ್ಚರವಹಿಸಬೇಕೆಂದು ಸಚಿವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.
ಸಚಿವರ ಸೂಚನೆಯಂತೆ ಪೌರಾಯುಕ್ತರು ರಾಜಕಾಲುವೆ ಸ್ವಚ್ಛಗೊಳಿಸಿ ಸರಾಗವಾಗಿ ಮಳೆ ನೀರು ಹೋಗುವಂತೆ ಮಾಡಲಾಗಿದೆ.

ರಾಜ ಕಾಲುವೆ ಹಾದು ಹೋಗಿರುವ ಮಾರ್ಗದಲ್ಲಿ ಯಾರೊಬ್ಬರೂ ಒತ್ತುವರಿ ಮಾಡಬಾರದು. ರಾಜಕಾಲುವೆಗೆ ಇಂತಿಷ್ಟೇ ಬಫರ್ ಝೋನ್ ಜಾಗ ಮೀಸಲಿಡಬೇಕು. ಸಚಿವರ ಸೂಚನೆಯಂತೆ ರಾಜಕಾಲುವೆ ಒತ್ತುವರಿ ಮಾಡಿರುವವರಿಗೆ ನೋಟಿಸ್ ನೀಡಲಾಗುತ್ತದೆ. ಮುಂದೆ ಮಳೆ ಅನಾಹುತಗಳಾದರೆ ಒತ್ತುವರಿದಾರರೇ ಹೊಣೆಯಾಗಬೇಕಾಗುತ್ತ”. ಎ.ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

 

 

 

Share This Article
error: Content is protected !!
";