ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ನಗರದ ವಿವಿಧ ಚರಂಡಿಗಳು ಕಟ್ಟಿಕೊಂಡಿದ್ದು ಮುಂಜಾಗ್ರತೆ ವಹಿಸಿ ನಗರ ನಗರಸಭಾ ಅಧ್ಯಕ್ಷರು, ಸದಸ್ಯರು, ಆರೋಗ್ಯ ನಿರೀಕ್ಷಕರು ಹಾಗೂ ಪೌರ ಸೇವಾ ಕಾರ್ಮಿಕರು ಜೊತೆಗೂಡಿ ನಗರದ ಚರಂಡಿಗಳಿಗೆ ನೀರು ಹೋಗದೆ ಕಟ್ಟಿಕೊಂಡಿದ್ದ ಚರಂಡಿಗಳಿಗೆ ಸರಾಗವಾಗಿ ನೀರು ಹೋಗುವಂತೆ ಚರಂಡಿ ಸ್ವಚ್ಛತೆ ಮಾಡಲಾಯಿತು.
ಭಾರೀ ಮಳೆಯಿಂದಾಗಿ ನಗರ ವ್ಯಾಪ್ತಿಯ ವಾರ್ಡ್ ನಂ:24ರ ಮಲ್ಲೇಶ್ವರ ಬಡಾವಣೆ, ವಾರ್ಡ್ ನಂ:22ರ ಸಿ.ಎಂ ಲೇಔಟ್ ನ ಅಂಬೇಡ್ಕರ ಸ್ಕೂಲ್ ಹತ್ತಿರ ಅಂಗನವಾಡಿ ಮತ್ತು ಮನೆ ಮನೆಗಳಿಗೆ ನೀರು ನುಗ್ಗಿರುವುದು, ವಾರ್ಡ್ ನಂ:28ರ ಜೈಮಿನಿ ಸ್ಕೂಲ್ ಹತ್ತಿರ ಬಡಾವಣೆ ಸಂಪೂರ್ಣ ಮುಳುಗಡೆಯಾಗಿರುವುದು ಕಂಡುಬಂದಿದ್ದು ಮತ್ತು ವಾರ್ಡ್ ನಂ:20 ರ ಹುಳಿಯಾರ್ ರಸ್ತೆಯಲ್ಲಿ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಹರಿಯುತ್ತಿದ್ದು ಮತ್ತು ಲಕ್ಕವ್ವನಹಳ್ಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.
ಈ ಅವ್ಯವಸ್ಥೆ ಕಂಡ ನಗರಸಭೆ ಅಧ್ಯಕ್ಷ ವೆಂಕಟೇಶ್, ಪೌರಾಯುಕ್ತ ಎ.ವಾಸೀಂ, ಸದಸ್ಯ ಎಂ.ಡಿ ಸಣ್ಣಪ್ಪ ಸೇರಿದಂತೆ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಮತ್ತು ಆರೋಗ್ಯ ನಿರೀಕ್ಷಕರುಗಳು,
ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ ಪೌರ ಕಾರ್ಮಿಕರುಗಳ ಮುಂಖಾತರ ಹಿರಿಯೂರು ಪ್ರಧಾನ ರಸ್ತೆಯ ಎರಡು ಬದಿಯ ಚರಂಡಿಗಳ ಚಪ್ಪಡಿ ಕಲ್ಲುಗಳನ್ನು ತೆಗೆಸಿ ಮಳೆ ನೀರು ಸರಾಗವಾಗಿ ಹೋಗುವಂತೆ ಮಾಡಲಾಯಿತು.
ನಗರಸಭೆ ಜೆಸಿಬಿ ವಾಹನದ ಜೊತೆಗೆ ಹಿಟಾಚಿ ಮತ್ತು ಮತ್ತೊಂದು ಜೆಸಿಬಿ ಯನ್ನು ಬಾಡಿಗೆ ಪಡೆದು ಟ್ರಂಚ್ ಹೊಡೆಸುವ ಮೂಲಕ ಮತ್ತು ಚರಂಡಿ ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ರಾಜಕಾಲುವೆಯಲ್ಲಿ ಹರಿಯುವಂತೆ ವ್ಯವಸ್ಥೆ ಕಲ್ಪಿಸಲಾಯಿತು.

ಸಿ.ಎಂ ಲೇಔಟ್ ನಲ್ಲಿ ಮುಂಜ್ರಾಗತೆ ಕ್ರಮವಾಗಿ ಟ್ರಂಚ್ ಹೊಡೆಸುವುದರ ಮೂಲಕ ಮತ್ತೆ ಮಳೆಯಾದಲ್ಲಿ ಮನೆಗಳಿಗೆ ನೀರು ನುಗ್ಗದಂತೆ ವ್ಯವಸ್ಥೆ ಕಲ್ಪಿಸಲಾಯಿತು ಎಂದು ನಗರಸಭೆ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಪೌರಕಾರ್ಮಿಕರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

