ವಕೀಲರ ಸಂಘದ ಸಂಘದ ಚುನಾವಣೆಯಲ್ಲಿ ಮುನಿರಾಜು ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ವಕೀಲರ ಸಂಘದ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ದೊಡ್ಡಬಳ್ಳಾಪುರ ಮೂಲದ ಮುನಿರಾಜು ಕೆ. ರವರು ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.

       ದಿನಾಂಕ 16.2.2025ರಂದು ನಡೆದ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ವಕೀಲರ ಸಂಘದ ಚುನಾವಣೆಯಲ್ಲಿ ಸರಳ ವ್ಯಕ್ತಿತ್ವದ ಯುವ ವಕೀಲ ಮುನಿರಾಜುರವರು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಮೊದಲ ಬಾರಿ ಸ್ಪರ್ದಿಸಿದ್ದರು. ತೀರಾ ಹಣಾ ಹಣಿಯ ಪ್ರಬಲ ಪೈಪೋಟಿ ಮದ್ಯೆ ಅತ್ಯಧಿಕ ಮತ ಗಳಿಸುವ ಮೂಲಕ ಮುನಿರಾಜು ಆಯ್ಕೆಯಾದ್ದಾರೆ.

- Advertisement - 

       ಚುನಾವಣೆಯಲ್ಲಿ ಜಯಗಳಿಸಿದ ಮುನಿರಾಜು ರವರನ್ನು ಹಲವಾರು ವಕೀಲ ಮಿತ್ರರು, ಸಾರ್ವಜನಿಕರು ಅಭಿನಂದಿಸಿದರು. ಈ ವೇಳೆ ಪತ್ರಿಕಾ ಹೇಳಿಕೆ ನೀಡಿದ ಮುನಿರಾಜು ನನ್ನ ಗೆಲುವಿನಲ್ಲಿ ದೊಡ್ಡಬಳ್ಳಾಪುರ ವಕೀಲರ ಪಾತ್ರ ಅತ್ಯಂತ ನಿರ್ಣಾಯಕವಾಗಿತ್ತು. ಅದರಲ್ಲೂ ದೊಡ್ಡಬಳ್ಳಾಪುರ ವಕೀಲರ ಸಂಘದ ಅಧ್ಯಕ್ಷರಾದ ರವಿ ಮಾವಿನಕುಂಟೆ, ಪ್ರದಾನ ಕಾರ್ಯದರ್ಶಿ ಎ. ಕೃಷ್ಣಮೂರ್ತಿ, ಖಜಾಂಚಿ ಮುನಿರಾಜು ಹಾಗೂ ಹಿರಿಯ ವಕೀಲರಾದ ಮುನಿಗಂಗಯ್ಯನವರ ಅವಿರತ ಶ್ರಮ ಮಹತ್ತರವಾದುದು. ಆದ್ದರಿಂದ ಅವರಿಗೆ ನಾನು ಅಭಾರಿಯಾಗಿದ್ದೇನೆ. ಜೊತೆಗೆ ನನ್ನ ಗೆಲುವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ದೊಡ್ಡಬಳ್ಳಾಪುರ ಸಮಸ್ತ ವಕೀಲ ಮಿತ್ರರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಮುನಿರಾಜು ಹೇಳಿದ್ದಾರೆ.

 

- Advertisement - 

Share This Article
error: Content is protected !!
";